Friday, September 20, 2024
Google search engine
Homeತಾಜಾ ಸುದ್ದಿಹೆಜಾಬುಲ್ಲಾ 1000 ರಾಕೆಟ್ ಧ್ವಂಸಗೊಳಿಸಿದ ಇಸ್ರೇಲ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ!

ಹೆಜಾಬುಲ್ಲಾ 1000 ರಾಕೆಟ್ ಧ್ವಂಸಗೊಳಿಸಿದ ಇಸ್ರೇಲ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ!

ಪೇಜರ್ ಮತ್ತು ವಾಕಿಟಾಕಿ ಸ್ಫೋಟ ಬೆನ್ನಲ್ಲೇ ಹೆಜಾಬುಲ್ಲಾ ಪ್ರತಿದಾಳಿ ನಡೆಸಿದ್ದರೂ ಇಸ್ರೇಲ್ ರಕ್ಷಣಾ ಪಡೆಗಳು ವಿಫಲಗೊಳಿಸಿವೆ. ಲೆಬೆನಾನ್ ಮತ್ತು ಇಸ್ರೇಲ್ ನಡುವೆ ಭಾರೀ ಪ್ರಮಾಣದಲ್ಲಿ ದಾಳಿ-ಪ್ರತಿದಾಳಿ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇಸ್ರೇಲ್ ಮೇಲೆ ದಾಳಿಗೆ ಸಜ್ಜಾಗಿದ್ದ 100ಕ್ಕೂ ಹೆಚ್ಚು ರಾಕೆಟ್ ಲಾಂಚರ್ ಗಳನ್ನು ಉಡಾಯಿಸಲಾಗಿದ್ದು, 1000ಕ್ಕೂ ಹೆಚ್ಚಿ ರಾಕೆಟ್ ಗಳನ್ನು ಧ್ವಂಸ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ.

ಪೇಜರ್ ಮತ್ತು ವಾಕಿ-ಟಾಕಿ ದಾಳಿಗಳ ನಂತರ ಹೆಜಾಬುಲ್ಲಾ ಮುಖ್ಯಸ್ಥ ಇಸ್ರೇಲ್ ಗೆ ತಕ್ಕ ತಿರುಗೇಟು ನೀಡುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ಪ್ರತಿದಾಳಿ ನಡೆದಿದೆ.

ಇದೇ ವೇಳೆ ಲೆಬೆನಾನ್ ನಿಂದ ಹೊರಡುವ ವಿಮಾನಗಳಲ್ಲಿ ವಾಕಿಟಾಕಿ, ಪೇಜರ್ ಗಳ ಬಳಕೆ ನಿಷೇಧಿಸಿ ಹೆಜಾಬುಲ್ಲಾ ಆದೇಶ ಹೊರಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments