ಪರಶಿವನ ಧನಸ್ಸಿನ ಹೆಸರು ಹೊಂದಿರುವ ಪಿನಾಕಾ ರಾಕೆಟ್ ಭಾರತೀಯ ಸೇನೆಯ ಪ್ರಮುಖ ಅಸ್ತ್ರಕ್ಕೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ಬಂದಿದೆ.
ಪಿನಾಕಾ ರಾಕೆಟ್, ರಷ್ಯಾದ ಗ್ರಾಡ್ ಬಿಎಂ-21 ರಾಕೆಟ್ ಸರಿಸಮವಾಗಿದ್ದು, ಅತ್ಯಾಧುನಿಕ ಗುರಿ ತಲುಪುವ ಶಸ್ತ್ರಾಸ್ತ್ರ ವ್ಯವಸ್ಥೆ ಆಗಿರುವ ಪಿನಾಕಾ ರಾಕೆಟ್ ಒಂದೇ ಬಾರಿಗೆ ಹಲವು ದಿಕ್ಕುಗಳಲ್ಲಿ ನಿರ್ದಿಷ್ಟ ಗುರಿಗಳನ್ನು ಏಕಕಾಲದಲ್ಲಿ ತಲುಪಬಲ್ಲ ಸಾಮರ್ಥ್ಯ ಹೊಂದಿದೆ.
ಈಗಾಗಲೇ ಪಿನಾಕಾ ರಾಕೆಟ್ ಗಳನ್ನು ವೈಮಾನಿಕ ಪರೀಕ್ಷೆಯ ಮೂಲಕ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ. ಇದರ ನಿಖರತೆ ಹಾಗೂ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಕೆಟ್ ಲಾಂಚರ್ ನಿಂದ 12 ಪಿನಾಕಾ ರಾಕೆಟ್ ಉಡಾಯಿಸಲಾಗಿದ್ದು, 12 ಕಡೆ ಇಡಲಾಗಿದ್ದ ಗುರಿಯನ್ನು ಯಶಸ್ವಿಯಾಗಿ ತಲುಪಿದೆ.
ಫ್ರಾನ್ಸ್, ಅರ್ಮೆನಿಯಾದಿಂದ ಭಾರೀ ಬೇಡಿಕೆ ಬಂದಿದ್ದು, ಇರಾನ್ ಮೂಲಕ 2023ರಲ್ಲಿ ಅರ್ಮೆನಿಯಾಗೆ ಕಳುಹಿಸಲಾಗಿದ್ದ ಪಿನಾಕಾ ರಾಕೆಟ್ ಅಜರ್ ಬೈಜಾನ್ ವಿರುದ್ಧ ಪರಿಣಾಮಕಾರಿಯಾಗಿ ಬಳಸಿದೆ ಎಂದು ವರದಿ ಹೇಳಿದೆ.