ಕಳೆದ 4 ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಷೇರುಗಳ ತೀವ್ರ ಕುಸಿತದಿಂದ ಹೂಡಿಕೆದಾರರಿಗೆ ಸುಮಾರು 24.69 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆಗಳ ಏರಿಕೆ, ವಿದೇಶಿ ನಿಧಿಯ ನಿರಂತರ ಹೊರಹರಿವು, ಆರಂಭಿಕ ದರ ಕಡಿತದ ನಿರೀಕ್ಷೆಗಳು ಕುಸಿದಿದೆ. ಮತ್ತೊಂದೆಡೆ ಅಮೆರಿಕದ ಉದ್ಯೋಗ ದತ್ತಾಂಶ ಮತ್ತು ಸುಮಾರು 2 ವರ್ಷಗಳಲ್ಲಿ ರೂಪಾಯಿ ಮೌಲ್ಯ ಕಳಪೆ ಮೊತ್ತಕ್ಕೆ ಕುಸಿದಿರುವುದು ಭಾರತೀಯ ಹೂಡಿಕೆದಾರರ ಭಾರೀ ನಷ್ಟಕ್ಕೆ ಕಾರಣವಾಗಿದೆ.
ಕಳೆದ ನಾಲ್ಕು ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,869.1 ಪಾಯಿಂಟ್ ಅಥವಾ ಶೇ. 2.39 ರಷ್ಟು ಕುಸಿತ ಕಂಡಿದೆ.
ನಾಲ್ಕನೇ ದಿನವಾದ ಶುಕ್ರವಾರ ಕೂಡ ಸತತ ವಹಿವಾಟಿನಲ್ಲಿ ಕುಸಿತ ಕಂಡ 30 ಷೇರುಗಳ ಬಿಎಸ್‌ಇ ಮಾನದಂಡ ಸೆನ್ಸೆಕ್ಸ್ 1,048.90 ಪಾಯಿಂಟ್‌ಗಳು ಅಥವಾ ಶೇಕಡಾ 1.36 ರಷ್ಟು ಕುಸಿದು ಅಂತಿಮವಾಗಿ 76,330.01 ಕ್ಕೆ ಸ್ಥಿರವಾಯಿತು. ದಿನದ ಅಂತ್ಯದಲ್ಲಿ, ಅದು 1,129.19 ಪಾಯಿಂಟ್‌ಗಳು ಅಥವಾ ಶೇಕಡಾ 1.45 ರಷ್ಟು ಕುಸಿದು 76,249.72 ಕ್ಕೆ ತಲುಪಿದೆ.
ಬಿಎಸ್‌ಇ-ಪಟ್ಟಿಯಾದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು ನಾಲ್ಕು ದಿನಗಳಲ್ಲಿ ರೂ. 24,69,243.3 ಕೋಟಿಗಳಷ್ಟು ಕುಸಿದು ರೂ. 4,17,05,906.74 ಕೋಟಿ (ಯುಎಸ್‌ಡಿ 4.82 ಟ್ರಿಲಿಯನ್) ತಲುಪಿದೆ. ಸೋಮವಾರದ ಷೇರುಗಳಲ್ಲಿನ ತೀವ್ರ ಕುಸಿತದೊಂದಿಗೆ, ಬಿಎಸ್‌ಇ-ಪಟ್ಟಿಯಾದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು 5 ಟ್ರಿಲಿಯನ್ ಡಾಲರ್‌ಗಿಂತ ಕಡಿಮೆಯಾಗಿದೆ.
ಸೋಮವಾರ ಒಂದೇ ದಿನ ಹೂಡಿಕೆದಾರರು 12.61 ಲಕ್ಷ ಕೋಟಿ ರೂ. ನಷ್ಟ ಮಾಡಿಕೊಂಡಿದ್ದರು. ಸುಮಾರು 20,000 ವಿದೇಶೀ ಷೇರುಗಳು ಭಾರೀ ಬೆಲೆಗೆ ಮಾರಾಟವಾಗಿದ್ದವು. ಡಾಲರ್ ಎದುರು ರೂಪಾಯಿ ತೀರ ಕಳಪೆ ಮಟ್ಟಕ್ಕೆ ಇಳಿದಿದ್ದು, ಹೂಡಿಕೆದಾರರಿಗೆ ದೊಡ್ಡ ಹೊಡೆತ ನೀಡಿದೆ.