Monday, July 1, 2024
Google search engine
Homeತಾಜಾ ಸುದ್ದಿಪೆರುನಲ್ಲಿ 7.2 ತಿವ್ರತೆಯ ಭೂಕಂಪನ, ಸುನಾಮಿ ಭೀತಿ

ಪೆರುನಲ್ಲಿ 7.2 ತಿವ್ರತೆಯ ಭೂಕಂಪನ, ಸುನಾಮಿ ಭೀತಿ

ಪೆರು ದೇಶದ ದ್ವೀಪದಲ್ಲಿ ಪ್ರಬಲ 7.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸ್ಥಳೀಯರಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.

ಅಮೆರಿಕದ ಭೂವಿಜ್ಞಾನ ಸಂಸ್ಥೆ ಭೂಕಂಪನ ದೃಢಪಡಿಸಿದ್ದು, ಅಟಿಕ್ಯುಪಾ ನಗರದಿಂದ ಸುಮಾರು 8.8 ಕಿ.ಮೀ. ದೂರದಲ್ಲಿ ಭೂಕಂಪನ ಸಂಭವಿಸಿದ್ದು, ಸಮುದ್ರ ತೀರದ ಪ್ರದೇಶಗಳಲ್ಲಿ ಸುನಾಮಿ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿದೆ.

ಆರಂಭದಲ್ಲಿ ಭೂಕಂಪನದಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿತ್ತು. ನಂತರ ಸಮುದ್ರದಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸಿ ಪೆಸಿಫಿಕ್ ಸಮುದ್ರದಲ್ಲಿ ಸಾಮಾನ್ಯಕ್ಕಿಂತ 3 ಮೀ. ಎತ್ತರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸಬಹುದು ಎಂದು ಮುನ್ನೆಚ್ಚರಿಕೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments