ಕಾಂಗ್ರೆಸ್ ಸಂಸದ ಮನು ಸಿಂಘ್ವಿ ಅವರ ಆಸನದಲ್ಲಿ ನೋಟಿನ ಕಂತೆ ಪತ್ತೆಯಾಗಿದ್ದರಿಂದ ರಾಜ್ಯಸಭೆಯಲ್ಲಿ ಶುಕ್ರವಾರ ಕೋಲಾಹಲ ಉಂಟಾಗಿದೆ.
ರಾಜ್ಯಸಭಾಧ್ಯಕ್ಷ ಜಗದೀಪ್ ಧಂಕರ್ ಗುರುವಾರ ನಡೆದ ಕಲಾಪ ಗದ್ಧಲದಿಂದ ಮುಂದೂಡಲಾಯಿತು. ನಂತರ ಕೊಠಡಿಯನ್ನು ಪರಿಶೀಲಿಸಿದಾಗ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮನು ಸಿಂಘ್ವಿ ಅವರ ಆಸನದಲ್ಲಿ ನೋಟಿನ ಕಂತೆ ಪತ್ತೆಯಾಗಿದೆ ಎಂದು ಹೇಳಿದರು.
ಇದರಿಂದ ಆಡಳಿತಾರೂಢ ಪಕ್ಷಗಳ ಸದಸ್ಯರು ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆದಿದ್ದರಿಂದ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿ ಏನೂ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಭಾಧ್ಯಕ್ಷರು ಹಣ ಸಿಕ್ಕಿದ್ದನ್ನು ಪ್ರಸ್ತಾಪಿಸಿ ತನಿಖೆಗೆ ಆದೇಶಿಸುವ ಬದಲು ಯಾರ ಹಣ ಎಂಬುದು ತನಿಖೆ ನಡೆಯುವ ಮುನ್ನವೇ ಮನು ಸಿಂಘ್ವಿ ಹೆಸರು ಘೋಷಿಸಿದ್ದಕ್ಕೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಆಸನ ಸಂಖ್ಯೆ 222ರಲ್ಲಿ ನೋಟಿನ ಕಂತೆ ಪತ್ತೆಯಾಗಿದೆ. ಈ ಆಸನವನ್ನು ಕಾಂಗ್ರೆಸ್ ಸಂಸದ ಮನು ಸಿಂಘ್ವಿ ಅವರಿಗೆ ನೀಡಲಾಗಿದೆ. ಈ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯಸಭಾ ಅಧ್ಯಕ್ಷರ ಜಗದೀಪ್ ಧಂಕರ್ ಹೇಳಿದರು.
ಸ್ಪೀಕರ್ ಆರೋಪವನ್ನು ಮನು ಸಿಂಘ್ವಿ ನಿರಾಕರಿಸಿದ್ದು, ನಾನು 500 ರೂ. ಮಾತ್ರ ಇಟ್ಟುಕೊಂಡಿದ್ದೆ. ಇಷ್ಟು ದೊಡ್ಡ ಮೊತ್ತ ಎಲ್ಲಿಂದ ಬರಲು ಸಾಧ್ಯ ಎಂದು ಪ್ರಶ್ನಿಸಿದರು.