ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಮಹಿಳೆಯರನ್ನೇ ಹೊಂದಿರುವ ಸಿಐಎಸ್ ಎಫ್ ನ ಮೀಸಲು ಪಡೆ ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
೧೦೦೦ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ಸಿಐಎಸ್ ಎಫ್ ಮೀಸಲು ಪಡೆ ರಚನೆಯಾಗಲಿದ್ದು, ಈ ಪಡೆ ದೇಶಾದ್ಯಂತ ವಿಮಾನ ನಿಲ್ದಾಣ, ರೈಲ್ವೆ ಸೇರಿದಂತೆ ವಿವಿಧ ಪ್ರಮುಖ ಸಂಸ್ಥೆಗಳ ಭದ್ರತೆಯ ಜವಾಬ್ದಾರಿ ವಹಿಸಿಕೊಳ್ಳಲಿದೆ. ಕಮಾಂಡೆಂಟ್ ದರ್ಜೆಯ ಮಹಿಳಾ ಅಧಿಕಾರಿಯೇ ಈ ಪಡೆಯ ಜವಾಬ್ದಾರಿ ವಹಿಸಲಿದ್ದಾರೆ.
ಮಹಿಳಾ ಪಡೆಗಳು ಸಿಐಎಸ್ ಎಫ್ ನಲ್ಲಿ ಒಟ್ಟಾರೆ 2 ಲಕ್ಷ ಯೋಧರಿದ್ದು, ಪುರುಷ ಸಿಬ್ಬಂದಿ ಜೊತೆ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಾಗಿತ್ತು. ಅಲ್ಲದೇ ಕೇವಲ 1025 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ಇತ್ತು.
ಇತ್ತೀಚೆಗೆ ಸುಪ್ರೀಂಕೋರ್ಟ್ ಮಹಿಳಾ ಪಡೆಗಳ ರಚನೆಗೆ ಸೂಚನೆ ನೀಡಿದ್ದೂ ಅಲ್ಲದೇ ಮಹಿಳೆಯರು ಕೂಡ ಸೇನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಹಾಗೂ ಜವಾಬ್ದಾರಿ ವಹಿಸಲು ಸಮರ್ಥರು. ಅವರನ್ನು ದೈಹಿಕ ಸಾಮರ್ಥ್ಯದ ಮೇಲೆ ಕಡೆಗಣಿಸಲು ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಸಿಐಎಸ್ಎಫ್ನಲ್ಲಿ 12 ಮೀಸಲು ಪಡೆಗಳು ಸಾಮಾನ್ಯವಾಗಿ ಚುನಾವಣೆ, ರಾಷ್ಟ್ರಪತಿ ಭವನ, ಸಂಸತ್ ಭವನ ಮುಂತಾದ ಪ್ರಮುಖ ಕಡೆಗಳ ಭದ್ರತಾ ವ್ಯವಸ್ಥೆಗಳ ಉಸ್ತುವಾರಿ ವಹಿಸಿಕೊಂಡಿರುತ್ತದೆ.
ದೇಶಾದ್ಯಾಂತ 68 ನಾಗರಿಕ ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ, ಮತ್ತು ತಾಜ್ ಮಹಲ್ ಮತ್ತು ರೆಡ್ ಫೋಟ್ ಹದಕ್ಕೂಂತಹ ಐತಿಹಾಸಿಕ ಸ್ಮಾರಕಗಳನ್ನು ಹಂದಿರುವುದು ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಹಿಳಾ ಸಿಬ್ಬಂದಿ ಅವಶ್ಯಕತೆ ಇದ್ದು, ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಮಹಿಳಾ ಮೀಸಲು ಪಡೆ ನಿಯೋಜನೆಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಮೀಸಲು ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
1969ರಲ್ಲಿ ಅಸ್ತಿತ್ವಕ್ಕೆ ಬಂದ ಸಿಐ ಎಸ್ಎಫ್ ಪರಮಾಣು ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಸುರಕ್ಷತಾ ತಡೆಗಟ್ಟಲು ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಇನ್ಫೋಸಿಸ್ ಮತ್ತು ರಿಲಯನ್ಸ್ ಸಂಶೋಧನಾ ಕೇಂದ್ರಗಳಂತಹ ಸಂಸ್ಥೆಗಳು ಸೇರಿವೆ.