Thursday, September 19, 2024
Google search engine
Homeತಾಜಾ ಸುದ್ದಿದೇಶದ ಸೇವೆ ಸಲ್ಲಿಸುವುದೇ ನನ್ನ ಏಕೈಕ ಗುರಿ: ಪ್ರಧಾನಿ ಮೋದಿ

ದೇಶದ ಸೇವೆ ಸಲ್ಲಿಸುವುದೇ ನನ್ನ ಏಕೈಕ ಗುರಿ: ಪ್ರಧಾನಿ ಮೋದಿ

ನನ್ನ ದೇಶ ಹಾಗೂ ದೇಶದ ಜನರಿಗೆ ಸೇವೆ ಸಲ್ಲಿಸುವುದೇ ನನ್ನ ಮೊದಲ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಶ್ನೆಗೆ ಉತ್ತರಿಸಿದ್ದಾರೆ.

ರಷ್ಯಾಗೆ ಎರಡು ದಿನಗಳ ಭೇಟಿಗೆ ಸೋಮವಾರ ತಡರಾತ್ರಿ ಮಾಸ್ಕೊಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಖಾಸಗಿ ಭೇಟಿ ವೇಳೆ ಹೀಗೆ ಹೇಳಿದ್ದಾರೆ.

ಭಾರತೀಯರಿಗೆ ಸೇವೆ ಸಲ್ಲಿಸಲು ನೀವು ಇಡೀ ಜೀವನವನ್ನು ಮುಡಿಪಾಗಿ ಇಟ್ಟಿದ್ದಿರ. ಇದನ್ನು ಜನರ ಗಮನಕ್ಕೂ ಬಂದಿದೆ ಎಂದು ಪುಟಿನ್ ಹೇಳಿದಾಗ ಪ್ರತಿಕ್ರಿಯಿಸಿದ ಮೋದಿ, ಹೌದು, ನನ್ನ ಇಡೀ ಜೀವನವನ್ನು ನನ್ನ ದೇಶದ ಜನರ ಸೇವೆಗೆ ಮೀಸಲಿಟ್ಟಿದ್ದೇನೆ ಎಂದರು.

ಇದಕ್ಕೂ ಮುನ್ನ ರಷ್ಯಾಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ ವ್ಲಾದಿಮಿರ್ ಪುಟಿನ್ ತಮ್ಮ ಅಧಿಕೃತ ನಿವಾಸ ನೊವೊ ಓಗ್ರಾಯಾವೊಗೆ ಕರೆದೊಯ್ದು ಖಾಸಗಿಯಾಗಿ ಚರ್ಚಿಸಿದರು.

ಡಿಯರ್ ಫ್ರೆಂಡ್ ಪ್ರಧಾನಿಯವರೇ ಮತ್ತೊಮ್ಮೆ ಗುಡ್ ಆಫ್ಟರ್ ನೂನ್. ನಿಮ್ಮನ್ನು ಮತ್ತೆ ಭೇಟಿ ಆಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ನಾವು ನಾಳೆ ಅಧಿಕೃತವಾಗಿ ಚರ್ಚೆ ಮಾಡೋಣ. ಆದರೆ ಈಗ ಕುಟುಂಬದವರಂತೆ ಮಾತನಾಡೋಣ. ಅದೇ ವಿಷಯವನ್ನು ಎಂದು ಪುಟಿನ್ ಮೋದಿ ಅವರನ್ನು ಸ್ವಾಗತಿಸಿದರು.

ನವೊ ಓಗ್ರಾವೋಕ್ಕೆ ಕರೆದೊಯ್ದ ಪುಟಿನ್, ಇಲ್ಲಿಯೇ ನಾನು ವಾಸ ಮಾಡೋದು. ಒಂದು ಭಾಗದಲ್ಲಿ ನಾವು ವಾಸ ಮಾಡುತ್ತೇನೆ. ಮತ್ತೊಂದು ಕಡೆ ನನ್ನ ಸಹದ್ಯೋಗಿಗಳು ಇರುತ್ತಾರೆ. ನೀವು ಕೂಡ ಇಂದು ಇಲ್ಲಿಯೇ ವಾಸ್ತವ್ಯ ಹೂಡಬಹುದು ಎಂದು ಪುಟಿನ್ ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments