6 ದಿನಗಳ ಕಳೆದರೂ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿರುವ 3 ವರ್ಷದ ಬಾಲಕಿ ರಕ್ಷಣೆಗೆ ಪ್ರಯತ್ನಗಳು ಮುಂದುವರಿಯುತ್ತಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಕಟ್ ಪುತಲಿ ಎಂಬಲ್ಲಿ ಸೋಮವಾರ ೩ ವರ್ಷದ ಬಾಲಕಿ ಚೇತನಾ 700 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ಆಕೆಯ ರಕ್ಷಣೆಗೆ ಜಿಲ್ಲಾಡಳಿತ ಹರಸಾಹಸಪಡುತ್ತಿದೆ. ಕಳೆದೆರಡು ದಿನ ಸುರಿದ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.
6 ದಿನಗಳಿಂದ ಕೊಳವೆ ಬಾವಿಯಲ್ಲಿ ಸಿಲುಕಿರುವ ಮಗಳನ್ನು ಹೇಗಾದರೂ ರಕ್ಷಿಸಿ ಎಂದು ತಾಯಿ ಧೋಲಾ ದೇವಿ ಅಧಿಕಾರಿಗಳ ಮುಂದೆ ಗೋಗರೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಏನೂ ಉತ್ತರ ನೀಡಬೇಕು ಎಂದು ತಿಳಿಯದೇ ಗೊಂದಲದಲ್ಲಿದ್ದಾರೆ.
ಬಾಲಕಿ ಚೇತನಾ ೧೫೦ ಆಳದಲ್ಲಿ ಸಿಲುಕಿದ್ದಾಳೆ ಎಂದು ಶಂಕಿಸಲಾಗಿದೆ. 6 ದಿನ ಕಳೆದಿರುವುದರಿಂದ ಬಾಲಕಿ ನಿದ್ದೆ ಮಾಡುತ್ತಿದ್ದಾಳೆಯೇ ಅಥವಾ ಆರೋಗ್ಯವಾಗಿ ಇದ್ದಾಳೆಯೇ ಎಂಬ ಗೊಂದಲ ಮುಂದುವರಿದಿದೆ.
ಅಧಿಕಾರಿಗಳು 90 ಡಿಗ್ರಿ ಸುತ್ತಳತೆಯ ಪೈಪ್ ಗಳನ್ನು ಕತ್ತರಿಸಿ ವೆಲ್ಡಿಂಗ್ ಮಾಡಿ ಬಾಲಕಿ ಇರುವ ಜಾಗದತ್ತ ತೆರಳಲು ಪ್ರಯತ್ನಿಸುತ್ತಿದ್ದಾರೆ. ಶನಿವಾರ ಬೆಳಿಗ್ಗೆ ಈ ಕಾರ್ಯ ಆರಂಭವಾಗಿದ್ದು, ಚೇತನಾ ಪ್ರಾರ್ಥಿಸಲಾಗುತ್ತಿದೆ.