ಮಕ್ಕಳಲ್ಲಿ ಓದುವ ಅಭ್ಯಾಸ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ಕಳೆದ ಎರಡು ದಶಕದಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ಸಮೀಕ್ಷೆ ವರದಿ ಕಳವಳ ವ್ಯಕ್ತಪಡಿಸಿದೆ.
ನ್ಯಾಷನಲ್ ಲಿಟ್ರಸಿ ಟ್ರಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳು ಅದರಲ್ಲೂ ಯೌವನ ಅವಸ್ಥೆಗೆ ಬರುತ್ತಿರುವವರಲ್ಲಿ ಓದಿನ ಮೂಲಕ ಖುಷಿ ಪಡುವ ಅಭ್ಯಾಸ ಕಡಿಮೆ ಆಗಿದೆ. ಕಳೆದ ಕೆಲವು ವರ್ಷಗಳಿಂದ ಈ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಪ್ರಮುಖವಾಗಿ ಗಂಡು ಮಕ್ಕಳೇ ಓದುವ ಅಭ್ಯಾಸದಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳಿದೆ.
ನ್ಯಾಷನಲ್ ಲಿಟ್ರಸಿ ಟ್ರಸ್ಟ್ ಸಂಸ್ಥೆ 2024ರ ಅವಧಿಯಲ್ಲಿ 5ರಿಂದ 8 ವರ್ಷದೊಳಗಿನ 76,131 ಮಕ್ಕಳನ್ನು ಸಮೀಕ್ಷೆಗೊಳಪಡಿಸಿದೆ. ಸಮೀಕ್ಷೆಯಲ್ಲಿ ಓದುವ ವಾತಾವರಣ, ಸ್ಫೂರ್ತಿ, ವಯಸ್ಸಿಗೆ ಹೊಸ ವಿಷಯಗಳ ಶೋಧನೆ, ಆರ್ಥಿಕ ಹಿನ್ನೆಲೆ ಸೇರಿದಂತೆ ವಿವಿಧ ವಿಷಯಗಳನ್ನು ಆಧರಿಸಿ ಸಮೀಕ್ಷೆ ಮಾಡಲಾಗಿದೆ.
2024ರ ವೇಳೆಗೆ 8ರಿಂದ 18 ವರ್ಷದೊಳಗಿನ ಶೇ.34.6ರಷ್ಟು ಮಕ್ಕಳು ಓದುವುದರಿಂದ ಸಂತೋಷ ಕಂಡುಕೊಂಡಿರುವುದಾಗಿ ತಿಳಿಸಿದ್ದಾರೆ. ಒಂದೇ ವರ್ಷದಲ್ಲಿ ಶೇ.8.8ರಷ್ಟು ಮಕ್ಕಳು ಓದುವುದನ್ನು ತ್ಯಜಿಸಿದ್ದಾರೆ. ಅಂದರೆ ಮೂರನೇ ಒಂದು ಭಾಗದಷ್ಟು ಮಕ್ಕಳು ಓದುವುದನ್ನು ನಿಲ್ಲಿಸಿದ್ದಾರೆ.
2024ರಲ್ಲಿ 8ರಿಂದ 18 ವರ್ಷದೊಳಗಿನ ಮಕ್ಕಳು ಪ್ರತಿನಿತ್ಯ ಆರಾಮವಾಗಿದ್ದ ಸಮಯದಲ್ಲಿ ಓದುವುದಾಗಿ ತಿಳಿಸಿದ್ದಾರೆ. ಇದು 2005ರ ವೇಳೆಗೆ ಶೇ.20.5ರಷ್ಟು ಮಕ್ಕಳು ಓದುತ್ತಿದ್ದು, ಶೇ.7.55ರಷ್ಟು ಕಡಿಮೆಯಾಗಿತ್ತು.