89
ಜವಾಹರ್ ನವೋದಯ ವಿದ್ಯಾಲಯದ 9 ಮತ್ತು 11ನೇ ತರಗತಿಗಳಿಗೆ ನವೋದಯ ವಿದ್ಯಾಲಯ ಸಮಿತಿ ಕರೆಯಲಾಗಿದ್ದ ಅರ್ಜಿ ಸಲ್ಲಿಕೆಯ ಗಡುವನ್ನು ನವೆಂಬರ್ 9ರವರೆಗೆ ವಿಸ್ತರಿಸಲಾಗಿದೆ.
2025-26ನೇ ಸಾಲಿನ ಅರ್ಜಿ ಸಲ್ಲಿಸಲು ನವೆಂಬರ್ 9 ಕೊನೆಯ ದಿನವಾಗಿದ್ದು, navodaya.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದವರಿಗೆ ಫೆಬ್ರವರಿ 8, 2025ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, 2 ಗಂಟೆ 30 ನಿಮಿಷಗಳ ಅವಧಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ನವೋದಯ ಶಾಲೆಗೆ ಸೇರ್ಪಡೆಗೊಳ್ಳಲಿದ್ದಾರೆ.