Home ಕ್ರೀಡೆ ಟಿ-20 ವಿಶ್ವಕಪ್ ನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಗೆ ಟೀಂ ಇಂಡಿಯಾ ಲಗ್ಗೆ

ಟಿ-20 ವಿಶ್ವಕಪ್ ನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಗೆ ಟೀಂ ಇಂಡಿಯಾ ಲಗ್ಗೆ

by Editor
0 comments

ನಾಯಕ ರೋಹಿತ್ ಶರ್ಮ ಸಿಡಿಲಬ್ಬರದ ಆಟದಿಂದ ಭಾರತ ತಂಡ 24 ರನ್ ಗಳ ಭಾರೀ ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದು ಟಿ-20 ವಿಶ್ವಕಪ್ ನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ.

ಗ್ರಾಸ್ ಎಸ್ಲೆಟ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಗೆಲುವಿನೊಂದಿಗೆ ಭಾರತ ತಂಡ ಗುಂಪು-1ರಲ್ಲಿ ಸತತ ಮೂರು ಗೆಲುವಿನೊಂದಿಗೆ ಸೋಲರಿಯದ ತಂಡವಾಗಿ ಸೆಮಿಫೈನಲ್ ಗೆ ಲಗ್ಗೆ ಹಾಕಿತು. ಆಸ್ಟ್ರೇಲಿಯಾ 3 ರಲ್ಲಿ 1 ಗೆಲುವು, 2 ಸೋಲಿನೊಂದಿಗೆ ಸೆಮಿಫೈನಲ್ ಹಾದಿ ದುರ್ಗಮವಾಗಿಸಿಕೊಂಡಿದೆ.

ಆಸ್ಟ್ರೇಲಿಯಾ ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ಟ್ರಾವಿಸ್ ಹೆಡ್ ಮತ್ತು ನಾಯಕ ಮಿಚೆಲ್ ಮಾರ್ಷ್ ಎರಡನೇ ವಿಕೆಟ್ ಗೆ 81 ರನ್ ಜೊತೆಯಾಟದಿಂದ ತಂಡದ ಪರ ಹೋರಾಟ ನಡೆಸಿದರು.

banner

ಟ್ರಾವಿಡ್ ಹೆಡ್ 43 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 76 ರನ್ ಸಿಡಿಸಿದರೆ, ಮಿಚೆಲ್ ಮಾರ್ಷ್ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 37 ರನ್ ಗಳಿಸಿದರು. ನಂತರ ಭಾರತದ ಬೌಲರ್ ಗಳು ತಿರುಗೇಟು ನೀಡಿದ್ದರಿಂದ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ತಂಡ ಗೆಲುವಿನ ಹಾದಿಯಿಂದ ನಿರ್ಗಮಿಸಿತು.

ಭಾರತದ ಪರ ಅರ್ಷದೀಪ್ ಸಿಂಗ್ 3, ಕುಲದೀಪ್ ಯಾದವ್ 2 ವಿಕೆಟ್ ಪಡೆದು ಮಿಂಚಿದರು.

ರೋಹಿತ್ ಮಿಂಚು

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅವರನ್ನು ಶೂನ್ಯಕ್ಕೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ರೋಹಿತ್ ಶರ್ಮ ಸಿಡಿಲಬ್ಬರದ ಆಟದಿಂದ ಪಂದ್ಯದ ದಿಕ್ಕೇ ಬದಲಿಸಿದರು.

ರೋಹಿತ್ ಶರ್ಮ 41 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ನೊಂದಿಗೆ 92 ರನ್ ಸಿಡಿಸಿ ಭಾರತ ಬೃಹತ್ ಮೊತ್ತ ಪೇರಿಸಲು ನೆರವಾದರು. ಸೂರ್ಯಕುಮಾರ್ ಯಾದವ್ (31), ರಿಷಭ್ ಪಂತ್ (15), ಹಾರ್ದಿಕ್ ಪಾಂಡ್ಯ (ಅಜೇಯ 27), ಶಿವಂ ದುಬೆ (28) ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತ 200ರ ಗಡಿ ದಾಟಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬಿಜೆಪಿಗೆ ಮಹಾರಾಷ್ಟ್ರ ಸಿಎಂ ಪಟ್ಟ, 2 ಪಕ್ಷಗಳಿಗ ಡಿಸಿಎಂ ಸ್ಥಾನ? World News 60 ದಿನಗಳ ಕದನ ವಿರಾಮ ಘೋಷಿಸಿದ ಇಸ್ರೇಲ್-ಹೆಜಾಬುಲ್ಲಾ! ಬಿಸಿ ತುಪ್ಪವಾದ ಅದಾನಿ ಜೊತೆ ಬಾಂಧವ್ಯ ಕಡಿದುಕೊಳ್ಳಲು ಬಿಜೆಪಿ ನಿರ್ಧಾರ? Priyanka Gandhi ನ.28ಕ್ಕೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಲಿರುವ ಪ್ರಿಯಾಂಕಾ ಗಾಂಧಿ ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ