ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯನ್ನು ಕಾರು ಚಾಲಕ ಕಾರಿನ ಬ್ಯಾನೆಟ್ ಮೇಲೆ 100 ಮೀ. ದೂರದವರೆಗೆ ಎಳೆದೊಯ್ದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ವಾಹನ ತಪಾಸಣೆಗಾಗಿ ಕಾರು ನಿಲ್ಲಿಸಿದ ಸಂಚಾರ ಠಾಣೆ ಪೊಲೀಸ್ ಪೇದೆ ಜೊತೆ ವಾಗ್ವಾದ ನಡೆಸಿದ ಕಾರು ಚಾಲಕ ಕಾರು ನಿಲ್ಲಿಸದೇ ವಾಹನ ಚಲಾಯಿಸಿದ್ದಾನೆ. ಅಡ್ಡ ನಿಂತಿದ್ದ ಪೇದೆ ಕಾರಿನ ಬ್ಯಾನೆಟ್ ಏರಿದರೂ ನಿಲ್ಲಿಸದೇ ಹೋಗಿದ್ದಾನೆ.
ನಗರದ ಸಹ್ಯಾದ್ರಿ ಕಾಲೇಜು ಬಳಿಯ ಬಿ.ಹೆಚ್ ರಸ್ತೆಯಲ್ಲಿ ನಡೆದ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಚಾರ ಠಾಣೆ ಪೊಲೀಸ್ ಪೇದೆ ಪ್ರಭು ಎಂಬುವವರು ವಾಹನ ತಡೆದು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮುಂಭಾಗ ಬಿ.ಹೆಚ್ ರಸ್ತೆಯಲ್ಲಿ ಎಸ್ ಯುವಿ ಕಾರು ಚಾಲಕ ಮಿಥುನ್ ಅವರ ಕಾರು ನಿಲ್ಲಿಸಿದ್ದಾರೆ.
ರಸ್ತೆಯ ಪಕ್ಕಕ್ಕೆ ಕಾರು ನಿಲ್ಲಿಸುವಂತೆ ಪ್ರಭು ಸೂಚಿಸಿದರೂ ನಿಲ್ಲಿಸದ ಮಿಥುನ್ ಕಾರನ್ನು ಮುಂದೆ ಚಲಾಯಿಸಿದ್ದಾನೆ. ಈ ವೇಳೆ ಪೇದೆ ಪ್ರಭು ಕಾರಿನ ಬ್ಯಾನೆಟ್ ಏರಿದರೂ ಕ್ಯಾರೇ ಅನ್ನದ ಮಿಥುನ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಸುಮಾರು 100 ಮೀ. ದೂರದವರೆಗೆ ಎಳೆದೊಯ್ದಿದ್ದಾನೆ. ಮಿಥುನ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
A man driving an SUV in #Karnataka's #Shivamogga attemped to run over a traffic official after he was asked to stop for speeding. The traffic official, who was asking the driver to stop, was knocked over and landed on the car's bonnet.
The incident took place near Sahyadri… pic.twitter.com/OFdwiJ1zvS
— Hate Detector 🔍 (@HateDetectors) October 24, 2024