Wednesday, July 3, 2024
Google search engine
Homeತಾಜಾ ಸುದ್ದಿಅಮಿರ್ ಖಾನ್ ಪುತ್ರನ ಚೊಚ್ಚಲ ಚಿತ್ರ ಮಹಾರಾಜ್ ಬಿಡುಗಡೆಗೆ ತಡೆ!

ಅಮಿರ್ ಖಾನ್ ಪುತ್ರನ ಚೊಚ್ಚಲ ಚಿತ್ರ ಮಹಾರಾಜ್ ಬಿಡುಗಡೆಗೆ ತಡೆ!

ಬಾಲಿವುಡ್ ನಟ ಅಮಿರ್ ಖಾನ್ ಪುತ್ರ ಜುನೈದ್ ಖಾನ್ ಚೊಚ್ಚಲ ಚಿತ್ರ ಮಹಾರಾಜ್ ಚಿತ್ರ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ ನೀಡಿದೆ.

ಮಹಾರಾಜ್ ಚಿತ್ರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುವ ರೀತಿಯ ಸಂಭಾಷಣೆಗಳಿವೆ ಎಂದು ಹಿಂದೂ ಸಂಘಟನೆಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ.

ಮಹಾರಾಜ್ ಚಿತ್ರದ ಟ್ರೇಲರ್ ನಲ್ಲಿಯೇ ವಿವಾದಾತ್ಮಕ ಸಂಭಾಷಣೆಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಮಾಡದಂತೆ ಗುಜರಾತ್ ಹೈಕೋರ್ಟ್ ಸೂಚಿಸಿದೆ.

ಸಿದ್ಧಾರ್ಥ್ ಮಲ್ಹೋತ್ರಾ ನಿರ್ದೇಶಿಸಿ ನಿರ್ದೇಶಕ ಆದಿತ್ಯ ಚೋಪ್ರಾ ನಿರ್ಮಿಸಿರುವ ಮಹಾರಾಜ್ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಜೂನ್ 14ರಂದು ಬಿಡುಗಡೆ ಆಗಲಿದೆ. ಇದೇ ವೇಳೆ ಮಹಾರಾಜ್ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments