Sunday, September 8, 2024
Google search engine
Homeತಾಜಾ ಸುದ್ದಿರೈಲ್ವೆ ಹಳಿ ಮೇಲೆ ಕೂತು ಹಾಡು ಕೇಳುತ್ತಿದ್ದ ಇಬ್ಬರು ಬಾಲಕರು ರೈಲು ಹರಿದು ಸಾವು!

ರೈಲ್ವೆ ಹಳಿ ಮೇಲೆ ಕೂತು ಹಾಡು ಕೇಳುತ್ತಿದ್ದ ಇಬ್ಬರು ಬಾಲಕರು ರೈಲು ಹರಿದು ಸಾವು!

ರೈಲ್ವೆ ಹಳಿ ಮೇಲೆ ಕೂತು ಹಾಡು ಕೇಳುತ್ತಿದ್ದ ಇಬ್ಬರು ಯುವಕರ ಮೇಲೆ ರೈಲು ಹರಿದು ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.

ರಾಜ್ದೇಪುರ ನಿವಾಸಿಗಳಾದ ಸ್ನೇಹಿತರಾದ ಸಮೀರ್ (15) ಮತ್ತು ಜಾಕಿರ್ ಅಹ್ಮದ್ (16) ಮೃತಪಟ್ಟಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿ ದೀನ್ ದಯಾಳ್ ಪಾಂಡೆ ತಿಳಿಸಿದ್ದಾರೆ.

ಸ್ನೇಹಿತರಿಬ್ಬರು ರೈಲ್ವೆ ಹಳಿ ಮೇಲೆ ಕೂತು ಹಿಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಿದ್ದರು. ರೈಲು ಬಂದಿದ್ದು ಅವರಿಗೆ ಗೊತ್ತಾಗಿಲ್ಲ. ಇದರಿಂದ ರೈಲು ಹರಿದು ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ದಾಖಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments