Kannadavahini

ಬಾರಿಸು ಕನ್ನಡ ಡಿಂಡಿಮವ

raghu dixit
ಕ್ರೀಡೆ ತಾಜಾ ಸುದ್ದಿ ಮನರಂಜನೆ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕನ್ನಡ ಘಮಲು: ಕನ್ನಡಿಗ ರಘು ದೀಕ್ಷಿತ್ ರಿಂದ ಸಂಗೀತ ಕಾರ್ಯಕ್ರಮ!

ಜಾಗತಿಕ ಮಟ್ಟದ ಅತ್ಯಂತ ಪ್ರತಿಷ್ಠಿತ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದೇ ದೊಡ್ಡ ಗೌರವ. ಅದರಲ್ಲೂ ಅಲ್ಲಿ ಮನರಂಜನಾ ಕಾರ್ಯಕ್ರಮದಲ್ಲಿ ಅವಕಾಶ ಪಡೆಯುವುದಂತೂ ದೊಡ್ಡ ಸಾಧನೆಯೇ ಸರಿ. ಆದರೆ ಈ ಬಾರಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕನ್ನಡ ಹಾಡು ಮೊಳಗಿದೆ.

ಹೌದು, ಕನ್ನಡ ರ್ಯಾಪ್ ಸಿಂಗರ್ ಮತ್ತು ಸಂಗೀತ ನಿರ್ದೇಶಕ ಆಗಿರುವ ಮೈಸೂರಿನ ರಘು ದೀಕ್ಷಿತ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಮೂಲಕ ಕನ್ನಡ ಒಲಿಂಪಿಕ್ಸ್ ನಲ್ಲಿ ಮೊಳಗಲಿದೆ.

ಜನಪದ ಗೀತೆಗಳಿಗೆ ಆಧುನಿಕ ಸಂಗೀತದ ಸ್ಪರ್ಶ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಹಾಡುಗಳಿಗೆ ಜನಪ್ರಿಯತೆ ತಂದುಕೊಟ್ಟ ರಘು ದೀಕ್ಷಿತ್‍ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದು, ಕನ್ನಡದ ಹಾಡುವ ಸಾಧ್ಯತೆ ಇದೆ.

LEAVE A RESPONSE

Your email address will not be published. Required fields are marked *