Thursday, September 19, 2024
Google search engine
Homeತಾಜಾ ಸುದ್ದಿಪಾಕಿಸ್ತಾನದಲ್ಲಿ ವಾಟ್ಸಪ್, ಯೂಟ್ಯೂಬ್, ಫೇಸ್ ಬುಕ್ 6 ದಿನ ನಿಷೇಧ?

ಪಾಕಿಸ್ತಾನದಲ್ಲಿ ವಾಟ್ಸಪ್, ಯೂಟ್ಯೂಬ್, ಫೇಸ್ ಬುಕ್ 6 ದಿನ ನಿಷೇಧ?

ಎಕ್ಸ್ (ಟ್ವಿಟರ್) ಮತ್ತು ಟಿಕ್ ಟಾಕ್ ನಿಷೇಧಿಸಿದ್ದ ಪಾಕಿಸ್ತಾನ ಸೇನೆ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್ ಮತ್ತು ಯೂಟ್ಯೂಬ್ ಗಳನ್ನು ನಿಷೇಧಿಸಲು ಮುಂದಾಗಿದೆ.

4 ತಿಂಗಳ ಕಾಲ ಎಕ್ಸ್ ನಿಷೇಧಿಸಿದ್ದ ಪಾಕಿಸ್ತಾನ ಸೇನೆ ಇದೀಗ ಎಲ್ಲಾ ಸಾಮಾಜಿಕ ಜಾಲತಾಣವನ್ನು ಜುಲೈ 13ರಿಂದ 18ರವರೆಗೆ ನಿಷಧಿಸಲು ಮುಂದಾಗಿದೆ.

ರಮ್ಜಾನ್ ಪ್ರಯುಕ್ತ ದ್ವೇಷ ಪ್ರಸಾರ ಮಾಡುವ ಫೇಸ್ ಬುಕ್, ವಾಟ್ಸಪ್, ಇನ್ ಸ್ಟಾಗ್ರಾಂ, ಟಿಕ್ ಟಾಕ್ ಗಳನ್ನು 6 ದಿನಗಳ ಕಾಲ ನಿಷೇಧಿಸಲು ಪಾಕಿಸ್ತಾನ ಸೇನೆ ನಿರ್ಧರಿಸಿದೆ.

ನಮಾಜ್ ಸಂಪುಟ ಸಚಿವ ಮರಿಯಮ್ ನವಾಜ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಜುಲೈ 13ರಿಂದ 18ರವರೆಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 11 ಗಂಟೆಯವರೆಗೆ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ರಮ್ಜಾನ್ ಸೌಹಾರ್ದತೆಯ ಪವಿತ್ರ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಸುಳ್ಳು ಅಥವಾ ತಪ್ಪು ಮಾಹಿತಿ, ದ್ವೇಷದ ಸಂದೇಶಗಳು ರವಾನೆ ಆಗದಂತೆ ತಡೆಯಲು ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments