ತರಬೇತಿ ವಿಮಾನವೊಂದು ನಿಯಂತ್ರಣ ಕಳೆದುಕೊಂಡು ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಪೈಲೆಟ್ ಗಳು ಮೃತಪಟ್ಟ ದಾರಣ ಘಟನೆ ಅಮೆರಿಕದಲ್ಲಿ ಸಂಭವಿಸಿದೆ.
ಹೊನಲುಲು ವಿಮಾನ ನಿಲ್ದಾಣದ ಬಳಿ ಅತ್ಯಂತ ಕೆಳ ಹಂತದಲ್ಲಿ ಹಾರಾಡುತ್ತಿದ್ದ ವಿಮಾನ ನಿಯಂತ್ರಣ ಕಳೆದುಕೊಂಡು ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ.
ಕಮಕ ವಿಮಾನ 689 ಡೇನಿಯಲ್ ಕೆ ಇನೊಯಿ ಬಳಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ವಿಮಾನ ಪತನಗೊಳ್ಳುವ ಕೆಲವು ಸೆಕೆಂಡ್ ಗಳ ಮುನ್ನ ನಾವು ನಿಯಂತ್ರಣ ಕಳೆದುಕೊಳ್ಳುತ್ತಿದ್ದೇವೆ ಎಂದು ಪೈಲೆಟ್ ಗಳು ಹೇಳಿರುವುದು ದಾಖಲಾಗಿದೆ.
ಕಟ್ಟಡಕ್ಕೆ ಡಿಕ್ಕಿ ಹೊಡೆಯುವ ಬದಲು ಸಾಧ್ಯವಾದಷ್ಟು ಎಲ್ಲಿ ಜಾಗ ಸಿಕ್ಕರೂ ಅಲ್ಲಿ ವಿಮಾನ ಇಳಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡುತ್ತಿದ್ದರೂ ಅದು ಪರಿಣಾಮ ಬೀರಿಲ್ಲ.