Thursday, May 14, 2026
Google search engine
Homeಅಪರಾಧಪ್ರೇಯಸಿಯ ಕಿರುಕುಳ ತಾಳಲಾರದೇ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ

ಪ್ರೇಯಸಿಯ ಕಿರುಕುಳ ತಾಳಲಾರದೇ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ

ಪ್ರೀತಿಸಿದ ಯುವತಿಯ ಕಿರುಕುಳ ತಾಳಲಾರದೇ ಯುವಕ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಜೂನ್13ರಂದು ರಾಜಘಟ್ಟ ಗ್ರಾಮದ ಕೆರೆ ಬಳಿ ಸೆಲ್ಫಿ ವಿಡಿಯೋ ಮಾಡಿ ಮಂಜುನಾಥ್ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೀತಿಸಿದ ಯುವತಿ ಗಗನ ಮಾನಸಿಕ ಕಿರುಕುಳ ನೀಡುತ್ತಿದ್ದು, ಆಕೆಗೆ ಮತ್ತೊಂದು ಸಂಬಂಧವಿತ್ತು. ಅಲ್ಲದೇ ನನಗೆ ಕಿರುಕುಳ ನೀಡುವುದರ ಹಿಂದೆ ಆಕೆಯ ಕುಟುಂಬದವರ ಪಾತ್ರವೂ ಇದೆ ಎಂದು ವೀಡಿಯೋದಲ್ಲಿ ಮಂಜುನಾಥ್ ಆರೋಪ ಮಾಡಿದ್ದಾನೆ.

ಮಾತ್ರೆ ಸೇವಿಸಿ ಮಂಜುನಾಥ್ ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಮೊಬೈಲ್ ಪಾಸ್ವರ್ಡ್ ಸಮೇತ ಯುವಕ ಸೆಲ್ಫಿ ವಿಡಿಯೋ ಮಾಡಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಯುವತಿ ಮತ್ತು ಆಕೆ ಕುಟುಂಬಸ್ಥರು ನಾಪತ್ತೆ ಆಗಿದ್ದಾರೆ.

ಮಂಜುನಾಥ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments