Sunday, July 12, 2026
Google search engine
Homeವಿದೇಶ700 ರೂ.ನಲ್ಲಿ 130 ಕಿ.ಮೀ. ಹಾರಿದ ಜಗತ್ತಿನ ಮೊದಲ ಎಲೆಕ್ಟ್ರಿಕ್ ಪ್ರಯಾಣಿಕ ವಿಮಾನ

700 ರೂ.ನಲ್ಲಿ 130 ಕಿ.ಮೀ. ಹಾರಿದ ಜಗತ್ತಿನ ಮೊದಲ ಎಲೆಕ್ಟ್ರಿಕ್ ಪ್ರಯಾಣಿಕ ವಿಮಾನ

ಕಾರು, ಬೈಕ್ ನಂತರ ಇದೀಗ ವಿಶ್ವದ ಮೊದಲ ಪ್ರಯಾಣಿಕ ಎಲೆಕ್ಟ್ರಿಕ್ ವಿಮಾನಗಳು ಅಭಿವೃದ್ದಿಪಡಿಸಲಾಗಿದೆ. ಈ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಜಗತ್ತು ಸುತ್ತುವ ಅವಕಾಶ ಪ್ರವಾಸಿಗರಿಗೆ ಲಭ್ಯವಾಗಲಿದೆ.

ಹೌದು, ಬೆಟಾ ಟೆಕ್ನಾಲಿಜಿಸ್ ಅಲಿಯಾ ಸಿಎಕ್ಸ್ 300 ಜಗತ್ತಿನ ಮೊದಲ ಪ್ರಯಾಣಿಕರ ಎಲೆಕ್ಟ್ರಿಕ್ ವಿಮಾನ ಪರಿಚಯಿಸಿದೆ.

ಇಂಗ್ಲೆಂಡ್ ನ ಪೂರ್ವ ಹ್ಯಾಂಪ್ಟನ್ ನಿಂದ ಅಮೆರಿಕದ ಜಾನ್ ಆಫ್ ಕೆನಡಿ ವಿಮಾನ ನಿಲ್ದಾಣದವರೆಗೆ ಸುಮಾರು 130 ಕಿ.ಮೀ. ದೂರದವರಗೆ ಯಶಸ್ವಿಯಾಗಿ ಸಂಚಾರ ನಡೆಸಿದೆ.

ನಾಲ್ವರು ಪ್ರಯಾಣಿಕರಿದ್ದ ಈ ವಿಮಾನ ಯಶಸ್ವಿಯಾಗಿ ಪ್ರಯಾಣ ಬೆಳೆಸುವ ಮೂಲಕ ವೈಮಾನಿಕ ಜಗತ್ತಿನಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.

ವಿಶೇಷ ಅಂದರೆ ಹೆಲಿಕಾಫ್ಟರ್ ಮತ್ತು ಪೆಟ್ರೋಲ್ ಆಧಾರಿತ ವಿಮಾನದಲ್ಲಿ ಇಷ್ಟು ದೂರ ಪ್ರಯಾಣಿಸಲು ತಗಲುವ ಪೆಟ್ರೋಲ್ ವೆಚ್ಚವೇ 13,885 ರೂ. ಆಗಿರುತ್ತದೆ. ಅಲ್ಲದೇ ಪ್ರಯಾಣಿಕರಿಗೆ ಸಾಮಾನ್ಯ ವಿಮಾನ ಮತ್ತು ಹೆಲಿಕಾಫ್ಟರ್ ನಲ್ಲಿ ಕಾಡುವ ಪ್ರೊಫೆಲರ್ ಶಬ್ಧ ಮತ್ತು ಇಂಜಿನ್ ಶಬ್ಧಗಳ ಕಿರಿಕಿರಿ ಇರಲಿಲ್ಲ.

ಇದು ಶೇ.100ರಷ್ಟು ಎಲೆಕ್ಟ್ರಿಕ್ ವಿಮಾನವಾಗಿದೆ. ಇದು ಇಂಧನ ರೂಪದಲ್ಲಿ ಬ್ಯಾಟರಿ ಬಳಸಲಾಗಿದ್ದು, 8 ಡಾಲರ್ ಅಂದರೆ 684 ರೂ. ಮಾತ್ರ ಖರ್ಚಾಗಿದೆ ಎಂದು ಬೆಟಾ ಟೆಕ್ನಾಲಿಜಿಸ್ ಸಿಇಒ ಮತ್ತು ಸಂಸ್ಥಾಪಕ ಅಧ್ಯಕ್ಷ ಕೈಲಿ ಕ್ಲಾರ್ಕ್ ತಿಳಿಸಿದ್ದಾರೆ.

ಬೆಟಾ ಟೆಕ್ನಾಲಜಿಸ್ 2017ರಲ್ಲಿ ಸ್ಥಾಪನೆಯಾಗಿದ್ದು, ಉತ್ಪಾದನೆ ತ್ವರಿತಗತಿಯಲ್ಲಿ ನಡೆಯಲಿ ಎಂಬ ಕಾರಣಕ್ಕೆ 300 ದಶಲಕ್ಷ ಡಾಲರ್ ಹೂಡಿಕೆ ಆಕರ್ಷಿಸಿ ಗಮನ ಸೆಳೆದಿದೆ. ಹೊಸದಾಗಿ ಅಭಿವೃದ್ಧಿಪಡಿಸಿದ ಎಲೆಕ್ಟ್ರಿಕ್ ವಿಮಾನ ಶೀಘ್ರದಲ್ಲೇ ಪ್ರಯಾಣಿಕ ಸೇವೆಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments