Sunday, 15 November 2026 — Kannadavahini
BREAKING NEWS
ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್
ಆರೋಗ್ಯ

ಪುರುಷರಿಗೂ ಬಂತು ಗರ್ಭ ನಿರೋಧಕ ಮಾತ್ರೆ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 27 ವೀಕ್ಷಣೆಗಳು
pregnent tablets

ಮುಂಬೈ: ಪುರುಷರಿಗಾಗಿ ಮೊದಲ ಹಾರ್ಮೋನ್-ಮುಕ್ತ ಗರ್ಭನಿರೋಧಕ ಔಷಧಿಯಾದ ವೈಸಿಟಿ-529, ತನ್ನ ಆರಂಭಿಕ ಮಾನವ ಸುರಕ್ಷತಾ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ, ಇದು ಗರ್ಭನಿರೋಧಕ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ವರದಿಯಾಗಿದೆ.

ಈ ಔಷಧಿಯು ಶುಕ್ರಾಣು ಉತ್ಪಾದನೆಯನ್ನು ತಾತ್ಕಾಲಿಕವಾಗಿ ತಡೆಗಟ್ಟುವ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲದೆ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.
ಪರೀಕ್ಷೆಯ ವಿವರಗಳು

2024ರಲ್ಲಿ ನಡೆದ ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ, 32 ರಿಂದ 29 ವರ್ಷ ವಯಸ್ಸಿನ 16 ಆರೋಗ್ಯವಂತ ಪುರುಷರನ್ನು ಒಳಗೊಂಡಿತ್ತು, ಎಲ್ಲರೂ ಈಗಾಗಲೇ ವ್ಯಾಸೆಕ್ಟಮಿ (ನಾಳಕಟ್ಟು ಶಸ್ತ್ರಚಿಕಿತ್ಸೆ) ಮಾಡಿಸಿದ್ದರು.

ಈ ಮುನ್ನೆಚ್ಚರಿಕೆಯ ಕ್ರಮವು ಔಷಧಿಯ ದೀರ್ಘಕಾಲೀನ ಫಲವತ್ತತೆಯ ಮೇಲಿನ ಪರಿಣಾಮಗಳ ಅಪಾಯವನ್ನು ತಪ್ಪಿಸಲು ತೆಗೆದುಕೊಳ್ಳಲಾಯಿತು.

ಭಾಗವಹಿಸುವವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು: ಒಂದು ಗುಂಪು 10 ಮಿಲಿಗ್ರಾಂ ಮತ್ತು 30 ಮಿಲಿಗ್ರಾಂ ಡೋಸ್‌ಗಳನ್ನು ಪಡೆದರೆ, ಇನ್ನೊಂದು ಗುಂಪು ಪ್ಲಾಸಿಬೊ (ನಿಷ್ಕಿçಯ ಔಷಧಿ) ಪಡೆಯಿತು.
ಪರೀಕ್ಷೆಯ ಫಲಿತಾಂಶಗಳು ಔಷಧಿಯು ದೇಹದಲ್ಲಿ ಉತ್ತಮವಾಗಿ ಲಭ್ಯವಿದೆ ಮತ್ತು ಹೃದಯ ಬಡಿತ, ರಕ್ತದ ಪರಿಮಾಣಗಳು, ಟೆಸ್ಟೋಸ್ಟೆರಾನ್ ಮಟ್ಟಗಳು, ಮನಸ್ಥಿತಿ ಅಥವಾ ಲೈಂಗಿಕ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಗಮನಾರ್ಹ ಅಡ್ಡಪರಿಣಾಮಗಳನ್ನು ಉಂಟುಮಾಡಿಲ್ಲ ಎಂದು ತೋರಿಸಿವೆ.

ವೈಸಿಟಿ-529 ಹೇಗೆ ಕಾರ್ಯ ನಿರ್ವಹಿಸುತ್ತದೆ?

ವೈಸಿಟಿ -529 ಒಂದು ಗರ್ಭ ನಿರೋಧಕವಾಗಿ ಕಾರ್ಯನಿರ್ವಹಿಸಲು ರೆಟಿನಾಯಿಕ್ ಆಸಿಡ್ ರಿಸೆಪ್ಟರ್ ಆಲ್ಫಾ ಎಂಬ ಪ್ರೋಟೀನ್‌ನ್ನು ತಡೆಯುತ್ತದೆ, ಇದು ಶುಕ್ರಾಣು ರಚನೆ ಮತ್ತು ಪಕ್ವತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಈ ಔಷಧಿಯು ವಿಟಮಿನ್ ಎ ಯ ಮೆಟಾಬೊಲೈಟ್‌ನಿಂದ ಈ ರಿಸೆಪ್ಟರ್‌ನ ಸಕ್ರಿಯಗೊಳಿಸುವಿಕೆಯನ್ನು ತಡೆಯುತ್ತದೆ, ಇದರಿಂದ ಶುಕ್ರಾಣು ಉತ್ಪಾದನೆಯ ಸರಪಳಿ ಪ್ರತಿಕ್ರಿಯೆಯನ್ನು ತಡೆಗಟ್ಟುತ್ತದೆ.

ಪೂರ್ವ-ಕ್ಲಿನಿಕಲ್ ಪರೀಕ್ಷೆಗಳಲ್ಲಿ, ಇಲಿಗಳಲ್ಲಿ ಔಷಧಿಯು 90% ಪರಿಣಾಮಕಾರಿಯಾಗಿ ಗರ್ಭಧಾರಣೆಯನ್ನು ತಡೆಯಿತು. ಔಷಧಿಯನ್ನು ನಿಲ್ಲಿಸಿದ 4-6 ವಾರಗಳ ನಂತರ ಫಲವತ್ತತೆಯು ಮರಳಿತು.

ಇದೇ ರೀತಿಯ ಫಲಿತಾಂಶಗಳು ಪ್ರಾಣಿಗಳಾದ ಮೇಟ್‌ಗಳಲ್ಲಿ ಕಂಡುಬಂದವು, ಇದರಲ್ಲಿ ಔಷಧಿಯನ್ನು ಪ್ರಾರಂಭಿಸಿದ ಎರಡು ವಾರಗಳಲ್ಲಿ ಶುಕ್ರಾಣು ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು ಮತ್ತು 10-15 ವಾರಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿತು ಎಂದು ವರದಿ ಹೇಳಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8415 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment