ಹೆಜಾಬುಲ್ಲಾ ನೆಲೆಗಳನ್ನು ಕೇಂದ್ರೀಕರಿಸಿ ಇಸ್ರೇಲ್ ಲೆಬೆನಾನ್ ಮೇಲೆ ನಡೆಸಿದ ದಾಳಿಯಲ್ಲಿ 182ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದಕ್ಷಿಣ ಲೆಬೆನಾನ್ ಮೇಲೆ ಸೋಮವಾರ ಇಸ್ರೇಲ್ ಭಾರೀ ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 190ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಲೆಬೆನಾನ್ ರಕ್ಷಣಾ ಪಡೆ ತಿಳಿಸಿತ್ತು.
ಲೆಬೆನಾನ್ ತೊರೆಯುವಂತೆ ಇಸ್ರೇಲ್ ನಿಂದ 80,000ಕ್ಕೂ ಅಧಿಕ ಕರೆಗಳು ಬಂದಿವೆ. ಈ ಕರೆಗಳು ಬಂದ ಬೆನ್ನಲ್ಲೇ ಹೆಜಾಬುಲ್ಲಾ ನೆಲೆಗಳು ಎಂದು ಗುರುತಿಸಲಾದ ಕಟ್ಟಡಗಳ ಮೇಲೆ ಇಸ್ರೇಲ್ ಭಾರೀ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸಿದೆ.
ಒರೆಗೊ, ಇಮಾದ್, ಕ್ರೇಡಿಹ್ ಸೇರಿದಂತೆ ವಿವಿಧ ಕಂಪನಿಗಳಿಂದ 80 ಸಾವಿರಕ್ಕೂ ಅಧಿಕ ಕರೆಗಳು ಲೆಬೆನಾನ್ ನಿವಾಸಿಗಳಿಗೆ ಕರೆ ಬಂದಿದೆ. ಕೂಡಲೇ ಜಾಗ ತೆರವು ಮಾಡಿ ಎಂದು ಸಲಹೆ ನೀಡಿವೆ ಎಂದು ರಕ್ಷಣಾ ಇಲಾಖೆ ಆರೋಪಿಸಿದೆ.