ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುವ ವ್ಯಕ್ತಿಯ ಸಂಬಳ ಕೇವಲ 13,000 ಕೋಟಿ ರೂ. ಆದರೆ ಆತ ಐಷಾರಾಮಿ ಕಾರು ಸೇರಿದಂತೆ 21 ಕೋಟಿ ರೂ. ಮೌಲ್ಯದ ಸಂಪತ್ತು ಗಳಿಸಿದ್ದಾನೆ. ಸಾಲದು ಎಂಬಂತೆ ಗೆಳತಿಗೆ 4 ಬೆಡ್ ರೂಮ್ ನ ಫ್ಲ್ಯಾಟ್ ಉಡುಗೊರೆಯಾಗಿ ನೀಡಿದ್ದಾನೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ್ ದಲ್ಲಿರುವ ಕ್ರೀಡಾ ಸಂಕೀರ್ಣದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಸಾಗರದ ನಿವಾಸಿ ಹರ್ಷಲ್ ಕುಮಾರ್ ವಂಚಿಸಿ ಇದೀಗ ಪರಾರಿಯಾಗಿದ್ದಾನೆ.
ಹರ್ಷಲ್ ಪರಾರಿಯಾಗಿದ್ದರು. ಆತನ ಸಹದ್ಯೋಗಿ ಯಶೋಧಾ ಶೆಟ್ಟಿ ಮತ್ತು ಆಕೆಯ ಪತಿ ಬಿಕೆ ಜೀವನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕ್ರೀಡಾ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಹರ್ಷಲ್ ಸರ್ಕಾರದ ಲೆಟರ್ ಹೆಡ್, ಸೀಲ್ ಗಳನ್ನು ಸೃಷ್ಟಿಸಿದ್ದ. ಅಲ್ಲದೇ ಕ್ರೀಡಾ ವಿಭಾಗದ ಇ-ಮೇಲ್ ಅನ್ನು ಕೇವಲ ಒಂದು ಅಕ್ಷರ ಬದಲಿಸಿ ಮತ್ತೊಂದು ತನ್ನ ಇ-ಮೇಲ್ ಮೂಲಕ ಸಂಪರ್ಕ ಗಳಿಸುತ್ತಿದ್ದ.
ಇ-ಮೇಲ್ ವಿಳಾಸ ಬದಲಾಯಿಸಿದ ನಂತರ ಹರ್ಷಲ್ ಇಂಟರ್ನೆಟ್ ಬ್ಯಾಂಕಿಂಗ್ ಕೂಡ ಬದಲಾಯಿಸಿದ್ದ. ಇದೇ ವರ್ಷ ಜುಲೈ 1ರಿಂದ ಡಿಸೆಂಬರ್ 7ರವರೆಗೆ 13 ಬ್ಯಾಂಕ್ ಖಾತೆಗಳ ಮೂಲಕ 21.6 ಕೋಟಿ ರೂ. ಬಳಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ಗಳಿಸಿದ ಹಣದಿಂದ 1.2 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರು, 1.3 ಕೋಟಿ ರೂ. ಮೌಲ್ಯದ ಎಸ್ ಯುವಿ ಕಾರು ಮತ್ತು 32 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯೂ ಬೈಕ್ ಖರೀದಿಸಿದ್ದ ಹರ್ಷಲ್, ಛತ್ರಪತಿ ಸಂಭಾಜೀರಾವ್ ವಿಮಾನ ನಿಲ್ದಾಣದ ಬಳಿ ಗೆಳತಿಗೆ 4 ಬೆಡ್ ರೂಮ್ ನ ಫ್ಲ್ಯಾಟ್ ಖರೀದಿಸಿ ಉಡುಗೊರೆಯಾಗಿ ನೀಡಿದ್ದ.
ಕ್ರೀಡಾ ಇಲಾಖೆಯ ಅಧಿಕಾರಿ ಹಣದ ವ್ಯವಹಾರದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣವನ್ನು ಭೇದಿಸಿದರು. ಹರ್ಷಲ್ ಕದ್ದಿದ್ದ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದು, ಕಾರುಗಳು, ಫ್ಲ್ಯಾಟ್ ಹಾಗೂ ಇನ್ನಿತರೆ ದುಬಾರಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.