232 ಕೆಜಿ ತೂಕದ ಡ್ರಗ್ಸ್ ಕಳ್ಳಸಾಗಾಟ ಮಾಡುತ್ತಿದ್ದಾಗ ಗುಜರಾತ್ ಕಡಲತೀರದಲ್ಲಿ ಸಿಕ್ಕಿಬಿದ್ದ 8 ಪಾಕಿಸ್ತಾನಿಯಿರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
2015ರಲ್ಲಿ 7 ಕೋಟಿ ರೂ. ಮೌಲ್ಯದ 232 ಕೆಜಿ ಡ್ರಗ್ಸ್ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ 8 ಪಾಕಿಸ್ತಾನಿಯರಿಗೆ ಗುಜರಾತ್ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
11 ಡ್ರಮ್ ಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಡ್ರಗ್ಸ್ ತುಂಬಿ ದೋಣಿ ಮೂಲಕ ಭಾರತಕ್ಕೆ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಪಾಕಿಸ್ತಾನಿಯರಿಗೆ ಉದ್ದೀಪನ ನಿಗ್ರಹ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗಿದ್ದು, ತಲಾ 2 ಲಕ್ಷ ರೂ. ದಂಡ ವಿಧಿಸಲಾಗಿದೆ.
ಪಾಕಿಸ್ತಾನಿಯರ 3 ಸ್ಯಾಟಲೈಟ್ ಮೊಬೈಲ್ ಫೋನ್, ಜಿಪಿಎಸ್ ನೇವಿಗೇಟ್, ಎಲೆಕ್ಟ್ರಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.