ನವದೆಹಲಿ: ಭಾರತ ಆಯೋಜಿಸಿದ್ದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರೈಸಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತದತ್ತ ಪ್ರಯಾಣ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮಧ್ಯಾಹ್ನ ಭೂಮಿಗೆ ಮರಳಲಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಭಾನುವಾರ ಸಂಜೆ ಗಗನಯಾತ್ರಿಗಳು ಬೀಳ್ಕೊಡುಗೆ ಆಚರಿಸಿದ್ದು, ಬಾಹ್ಯಕಾಶದಲ್ಲಿ ನಡೆಸಿದ ಪ್ರಯೋಗಗಳು ಹಾಗೂ ಕಳೆದ ದಿನಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಜುಲೈ 14ರ ಸೋಮವಾರ ಸಂಜೆ 4.35ಕ್ಕೆ (ಇಟಿ ಬೆಳಿಗ್ಗೆ 7.05) ಅಂದರೆ ಇಂದು ಬೆಳಿಗ್ಗೆ ಭಾರತೀಯ ಕಾಲಮಾನ ೭.೦೫ಕ್ಕೆ ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. ಜುಲೈ 15, 2025ರಂದು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇಳಿದ ನಂತರ 7 ದಿನಗಳ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಗಾಗಲಿದ್ದಾರೆ.
ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳಾದ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಕಾರ್ಯಾಚರಣೆ ತಜ್ಞರಾದ ಪೋಲೆಂಡ್‌ನ ಸ್ಲಾವೋಜ್ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ವಾಣಿಜ್ಯ ಆಕ್ಸಿಯಮ್-4 ಮಿಷನ್‌ನ ಭಾಗವಾಗಿ ಜೂನ್ 26ರಂದು ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್ ತಲುಪಿದ್ದರು.
ನಾಲ್ವರು ಗಗನಯಾತ್ರಿಗಳು ಜುಲೈ 14ರ ಸೋಮವಾರ ಸಂಜೆ 4.35ಕ್ಕೆ (ಇಟಿ ಬೆಳಿಗ್ಗೆ 7.05) ಐಎಸ್‌ಎಸ್‌ನಿಂದ ಅನ್‌ಡಾಕ್ ಮಾಡಲು ನಿರ್ಧರಿಸಲಾಗಿದೆ ಎಂದು ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
ಇಸ್ರೋ ಪ್ರಕಾರ, ಕ್ರೂ ಡ್ರಾಗನ್ ಬಾಹ್ಯಾಕಾಶ ನೌಕೆಯು ಜುಲೈ 15, 2025ರಂದು ಮಧ್ಯಾಹ್ನ 3 ಗಂಟೆಗೆ ಕ್ಯಾಲಿಫೋರ್ನಿಯಾ ಕರಾವಳಿಯ ಬಳಿ ಇಳಿಯುವ ನಿರೀಕ್ಷೆಯಿದೆ.
“ಸ್ಪಾರ್ ಲಿಂಕ್ ಡೌನ್ ನಂತರ, ಗಗನಯಾತ್ರಿ ಭೂಮಿಯ ಗುರುತ್ವಾಕರ್ಷಣೆಗೆ ಮರಳಲು ಫ್ಲೆಂಟ್ ಸರ್ಜನ್ ಮೇಲ್ವಿಚಾರಣೆಯಲ್ಲಿ ಪುನರ್ವಸತಿ ಕಾರ್ಯಕ್ರಮಕ್ಕೆ (ಸುಮಾರು 7 ದಿನಗಳು) ಒಳಗಾಗಲಿದ್ದಾರೆ” ಎಂದು ಇಸ್ರೋ ತಿಳಿಸಿದೆ.
ಶುಕ್ಲಾ ಅವರ ಐಎಸ್‌ಎಸ್ ಪ್ರಯಾಣಕ್ಕಾಗಿ ಇಸ್ರೋ ಸುಮಾರು 550 ಕೋಟಿ ರೂಪಾಯಿಗಳನ್ನು ಪಾವತಿಸಿದೆ. ಇದು 2027ರಲ್ಲಿ ಕಕ್ಷೆಗೆ ಏರಲು ಸಿದ್ಧವಾಗಿರುವ ಮಾನವ ಬಾಹ್ಯಾಕಾಶ ಕಾರ್ಯಕ್ರಮವಾದ ಗಗನಯಾನವನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಬಾಹ್ಯಾಕಾಶ ಸಂಸ್ಥೆಗೆ ಸಹಾಯ ಮಾಡುತ್ತದೆ.
“ಇಸ್ರೋದ ವಿಮಾನ ಶಸ್ತçಚಿಕಿತ್ಸಕರು ಖಾಸಗಿ ವೈದ್ಯಕೀಯ/ಮಾನಸಿಕ ಸಮ್ಮೇಳನಗಳಲ್ಲಿ ಭಾಗವಹಿಸುವ ಮೂಲಕ ಗಗನಯಾತ್ರಿಗಳ ಒಟ್ಟಾರೆ ಆರೋಗ್ಯ ಮತ್ತು ಫಿಟ್‌ನೆಸ್ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಖಚಿತಪಡಿಸುತ್ತಿದ್ದಾರೆ.
ಗಗನಯಾತ್ರಿ ಶುಭಾಂಶು ಉತ್ತಮ ಆರೋಗ್ಯ ಮತ್ತು ಉತ್ಸಾಹದಲ್ಲಿದ್ದಾರೆ” ಎಂದು ಇಸ್ರೋ ತಿಳಿಸಿದೆ. ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.25ಕ್ಕೆ ಹೊರಡುವ ಮುನ್ನ ಅಗತ್ಯ ಪರೀಕ್ಷೆಗಳನ್ನು ನಡೆಸುವ ನಿರೀಕ್ಷೆಯಿದೆ.
ಐಎಸ್‌ಎಸ್ ಗಂಟೆಗೆ 28,000 ಕಿ.ಮೀ. ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದೆ, ಮತ್ತು ಬಾಹ್ಯಾಕಾಶ ನೌಕೆಯು ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಇಳಿಯಲು ಕ್ರಮೇಣ ನಿಧಾನಗೊಳಿಸಲು ಅನ್‌ಡಾಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.


