ಜಗತ್ತಿನ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ನಿಂದ ಇಸ್ರೊ (ಭಾರತೀಯ ಬಾಹ್ಯಕಾಶ ಸಂಸ್ಥೆ)ಯ ಸ್ಯಾಟಲೈಟ್ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಸಾರ ಸಂಪರ್ಕ ಸುಧಾರಣೆ ಹಾಗೂ ಹಗುರ ಇಂಟರ್ ನೆಟ್ ಸೇವೆಯ ಪ್ರಯಾಣಿಕ ವಿಮಾನವನ್ನೊಳಗೊಂಡ ಅತ್ಯಾಧುನಿಕ ಸಂವಹನ ಉಪಗ್ರಹವನ್ನು ಸೋಮವಾರ ತಡರಾತ್ರಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಗೋ ಫಾಲನ್, ಗೋ ಜಿಎಸ್ ಎಟಿ-20 ಘೋಷವಾಕ್ಯದೊಂದಿಗೆ ಫಾಲ್ಕನ್-9 ರಾಕೆಟ್ ಜಿಎಸ್ ಎಟಿ-20 ಎಂದೇ ಖ್ಯಾತಿ ಪಡೆದ ಜಿಎಸ್ ಎಟಿ ಎನ್-2 ನೌಕೆಯನ್ನು ಹೊತ್ತು ಬಾಹ್ಯಕಾಶಕ್ಕೆ ಚಿಮ್ಮಿದ್ದು, ಸುಮಾರು 34 ನಿಮಿಷಗಳ ಕಾಲ ಭೂಮಿಯ ಸುತ್ತ ಬಾಹ್ಯಕಾಶ ಹೊರವರ್ತುಲದಲ್ಲಿ ಸುತ್ತು ಹೊಡೆಯಲಿದೆ.
4700 ಕೆಜಿ ತೂಕದ ವಾಣಿಜ್ಯ ಸ್ಯಾಟಲೈಟ್ ಇದಾಗಿದ್ದು, ಫ್ಲೋರಿಡಾದಲ್ಲಿರುವ ಸ್ಪೇಸ್ ಎಕ್ಸ್ ಕಾಂಪ್ಲೆಕ್ಸ್ ನಿಂದ ಸೋಮವಾರ ತಡರಾತ್ರಿ 12.01 ನಿಮಿಷಕ್ಕೆ ನಭಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಭಾರತದ ಬಾಹ್ಯಕಾಶ ಸಂಸ್ಥೆ ಇದೇ ಮೊದಲ ಬಾರಿಗೆ ತನ್ನ ಉಪಗ್ರಹವನ್ನು ವಾಣಿಜ್ಯವಾಗಿ ಸ್ಪೇಸ್ ಎಕ್ಸ್ ನೊಂದಿಗೆ ಕೈ ಜೋಡಿ ಉಡಾವಣೆ ಮಾಡಿದೆ.