Home ತಾಜಾ ಸುದ್ದಿ 21 ಪಾಕಿಸ್ತಾನಿಯರು ಸೇರಿ 101 ವಿದೇಶೀಯರನ್ನು ಗಲ್ಲಿಗೇರಿಸಿದ ಸೌದಿ ಅರೆಬಿಯಾ!

21 ಪಾಕಿಸ್ತಾನಿಯರು ಸೇರಿ 101 ವಿದೇಶೀಯರನ್ನು ಗಲ್ಲಿಗೇರಿಸಿದ ಸೌದಿ ಅರೆಬಿಯಾ!

by Editor
0 comments
saudi arebia

ಪಾಕಿಸ್ತಾನಿಯರು ಸೇರಿದಂತೆ 100ಕ್ಕೂ ಹೆಚ್ಚು ವಿದೇಶೀಯರನ್ನು ಸೌದಿ ಅರೆಬಿಯಾ ಸರ್ಕಾರ ಒಂದೇ ವರ್ಷದಲ್ಲಿ ಗಲ್ಲಿಗೇರಿಸಿದೆ.

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಸೌದಿ ಅರೆಬಿಯಾದಲ್ಲಿ ವಿದೇಶೀಯರನ್ನು ವಿವಿಧ ಪ್ರಕರಣಗಳಲ್ಲಿ ಗಲ್ಲಿಗೇರಿಸಿದ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಘಾತ ವ್ಯಕ್ತಪಡಿಸಿದೆ.

2024ರ ಒಂದೇ ವರ್ಷದಲ್ಲಿ 101 ವಿದೇಶೀಯರನ್ನು ಗಲ್ಲಿಗೇರಿಸಲಾಗಿದೆ. 2022 ಮತ್ತು 2023ರಲ್ಲಿ ತಲಾ 34 ಜನರನ್ನು ಗಲ್ಲಿಗೇರಿಸಲಾಗಿತ್ತು.

ಪಾಕಿಸ್ತಾನದ 21, ಯೆಮೆನ್ 20, ಸಿರಿಯಾ 14, ನೈಜಿರಿಯಾ 10,  ಈಜಿಪ್ಟ್ 9, ಜೋರ್ಡಾನ್ 8, ಇಥಿಯೋಪಿಯಾದ 7, ಸುಡಾನ್, ಭಾರತ, ಆಫ್ಘಾನಿಸ್ತಾನದ ತಲಾ ಇಬ್ಬರು, ಶ್ರೀಲಂಕಾ, ಎರಿಟ್ರಿಯಾ ಮತ್ತು ಫಿಲಿಪ್ಪೆನ್ಸ್ ನ ತಲಾ ಒಬ್ಬರನ್ನು ಗಲ್ಲಿಗೇರಿಸಲಾಗಿದೆ.

banner

ಸೌದಿ ಅರೆಬಿಯಾದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಗಲ್ಲಿಗೇರಿಸುವ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ. ಡ್ರಗ್ಸ್ ಗೆ ಸಂಬಂಧಿಸಿದ 92 ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಇದರಲ್ಲಿ 69 ಪ್ರಕರಣಗಳು ವಿದೇಶೀಯರಿಗೆ ಸೇರಿದ್ದಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ವಿದೇಶೀಯರ ಗುಂಪು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಇದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗಲ್ಲು ಶಿಕ್ಷೆ ಕೊನೆಯ ಹಂತದ ಶಿಕ್ಷೆಯಾಗಿದೆ ಎಂದು ಸೌದಿ ಅರೆಬಿಯಾದ ಕಾನೂನು ನಿರ್ದೇಶಕ ತಾಹಾ ಅಲ್- ಹಾಜಿ ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ಸಿದ್ದಿಕಿ ಅರೆಸ್ಟ್! ರೈತರ ಮೇಲೆ ಅಶ್ರುವಾಯು ಸಿಡಿಸಿದ ಪೊಲೀಸರು: 8 ಮಂದಿಗೆ ಗಾಯ ಶಾಲೆಯ ಮುಖ್ಯೋಪಾಧ್ಯಯರಿಗೆ ಗುಂಡಿಕ್ಕಿ ಕೊಂದ 12ನೇ ತರಗತಿ ವಿದ್ಯಾರ್ಥಿ! ದೇವಸ್ಥಾನಕ್ಕೆ 23 ಕೋಟಿ ಕ್ಯಾಷ್, 1 ಕೆಜಿ ಚಿನ್ನದ ಬಿಸ್ಕತ್ತು, ಬೆಳ್ಳಿ ಪಿಸ್ತೂಲು ದಾನ! ವಿಜಯಪುರ: ಕಾರಿಗೆ ಕಬ್ಬು ಕಟಾವು ಮೆಷಿನ್ ಡಿಕ್ಕಿಯಾಗಿ 5 ಮಂದಿ ದುರ್ಮರಣ ಎಲ್ಲಾ ಕೃಷಿ ಉತ್ಪನ್ನ ಕನಿಷ್ಠ ಬೆಂಬಲ ಬೆಲೆಗೆ ಖರೀದಿ: ಕೇಂದ್ರ ಮಹತ್ವದ ಘೋಷಣೆ ಅಂಡರ್ 19 ಏಷ್ಯಾಕಪ್: ಲಂಕೆ ಮಣಿಸಿ ಫೈನಲ್ ಗೆ ಭಾರತ ಲಗ್ಗೆ ಸ್ಟಾರ್ಕ್ 6 ವಿಕೆಟ್‌: ಭಾರತದ ಮೊದಲ ದಿನವೇ 180 ರನ್ ಗೆ ಆಲೌಟ್! ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ಓಪನಿಂಗ್: ಎಲ್ಲಾ ದಾಖಲೆ ಮುರಿದ ಪುಷ್ಪ-2 ಹ್ಯಾಟ್ರಿಕ್ ಸೋಲಿನ ಸರದಾರ ನಿಖಿಲ್ ಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಸಾರಥ್ಯ: ಬಿಜೆಪಿ ಜೊತೆ ಚರ್ಚೆ ಆರಂಭ!