Home ದೇಶ ಕುತ್ತಿಗೆಗೆ ಬೋರ್ಡ್ ನೇತಾಕಿಕೊಂಡು ದೇವಸ್ಥಾನದಲ್ಲಿ ತಟ್ಟೆ ತೊಳೆದ ಪಂಜಾಬ್ ಮಾಜಿ ಡಿಸಿಎಂ!

ಕುತ್ತಿಗೆಗೆ ಬೋರ್ಡ್ ನೇತಾಕಿಕೊಂಡು ದೇವಸ್ಥಾನದಲ್ಲಿ ತಟ್ಟೆ ತೊಳೆದ ಪಂಜಾಬ್ ಮಾಜಿ ಡಿಸಿಎಂ!

ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಸುಕ್ಬಿರ್ ಬಾದಲ್ ಸಿಖ್ ಸಮುದಾಯದ ಪರಮೋಚ್ಛ ಸಂಘಟನೆಯಾದ ಅಕಲ್ ತಕ್ತ್ ನೀಡಿದ ಶಿಕ್ಷೆಯಂತೆ ಕುತ್ತಿಗೆಗೆ ಬೋರ್ಡ್ ನೇತಾಕಿಕೊಂಡು ದೇವಸ್ಥಾನ ಅಡುಗೆ ಮನೆ ಹಾಗೂ ಶೌಚಾಲಯ ಸ್ವಚ್ಛಗೊಳಿಸಿದರು.

by Editor
0 comments
sukbir singh badal

ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಸುಕ್ಬಿರ್ ಬಾದಲ್ ಸಿಖ್ ಸಮುದಾಯದ ಪರಮೋಚ್ಛ ಸಂಘಟನೆಯಾದ ಅಕಲ್ ತಕ್ತ್ ನೀಡಿದ ಶಿಕ್ಷೆಯಂತೆ ಕುತ್ತಿಗೆಗೆ ಬೋರ್ಡ್ ನೇತಾಕಿಕೊಂಡು ದೇವಸ್ಥಾನ ಅಡುಗೆ ಮನೆ ಹಾಗೂ ಶೌಚಾಲಯ ಸ್ವಚ್ಛಗೊಳಿಸಿದರು.

ಅಮೃತಸರದ ಸ್ವರ್ಣ ಮಂದಿರ ಸೇರಿದಂತೆ ಗುರುದ್ವಾರದ ಅಡುಗೆ ಮನೆ ಹಾಗೂ ಶೌಚಾಲಯವನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನು ವಿಧಿಸಲಾಗಿತ್ತು. ಇದರಂತೆ ಸುಕ್ಬೀರ್ ಸಿಂಗ್ ಬಾದಲ್ ನೇತೃತ್ವದಲ್ಲಿ ಅಕಾಲಿದಳ ಮುಖಂಡರು ಹಾಗೂ ಮಾಜಿ ಸಚಿವರು ದೇವಸ್ಥಾನದ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆದು ಜೋಡಿಸಿದರು. ನಂತರ ಶೌಚಾಲಯ ಸ್ವಚ್ಛಗೊಳಿಸಿದರು.

ಮಾಜಿ ಡಿಸಿಎಂ ಹಾಗೂ ಮಾಜಿ ಸಚಿವರು ಡಿಸೆಂಬರ್ 3ರಂದು ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೂ ಶೌಚಾಲಯ ಸ್ವಚ್ಛಗೊಳಿಸಬೇಕು. ಸ್ನಾನ ಮಾಡಿ ಕೆಲಸ ಆರಂಭಿಸುವಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಈ ಆದೇಶವನ್ನು ಅಕಾಲಿದಳದ ಮುಖಂಡರು ಪಾಲಿಸಿದರು.

ಸಕ್ಬೀರ್ ಬಾದಲ್ ತಾವು ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಿದ ನಂತರ ಸಿಖ್ ಸಮುದಾಯ ಈ ಶಿಕ್ಷೆಯನ್ನು ವಿಧಿಸಿದೆ.  ಶಿಕ್ಷೆಯಂತೆ ಕುತ್ತಿಗೆಗೆ ‘ಸೇವಕರು’ ಎಂಬ ಬೋರ್ಡ್ ತಗಲಾಕಿಕೊಂಡು ಸ್ವಚ್ಛಗೊಳಿಸುವ ಶಿಕ್ಷೆಯನ್ನು ಅನುಭವಿಸಿದರು.

banner

ಪ್ರಸ್ತುತ ಪೇರೋಲ್ ಮೇಲೆ ಬಿಡುಗಡೆ ಹೊಂದಿರುವ ಜೈಲು ಶಿಕ್ಷೆಗೆ ಗುರಿಯಾದ ಡೇರಾ ಸಚ್ಛ ಸೌಧಾದ ಗುರ್ಮಿತ್ ರಾಮ್ ರಹೀಂ ಅವರನ್ನು 2015ರಲ್ಲಿ ಗುರು ಗ್ರಂಥ್ ಸಾಹಿಬ್ ತ್ಯಾಗದ ವೇಳೆ ಬೆಂಬಲಿಸಿದ್ದರು. ಅಲ್ಲದೇ ಅವರ ತಂದೆ ಹಾಗೂ ಪಂಜಾಬ್ ಮಾಜಿ ಸಿಎಂ ದಿವಂಗತ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ 2011ರಲ್ಲಿ ಸಮುದಾಯದ ಅಭಿವೃದ್ಧಿಗೆ ನೀಡಿದ ಸೇವೆಯನ್ನು ಗುರುತಿಸಿ ನೀಡಲಾಗಿದ್ದ ಸಿಖ್ ಸಮುದಾಯದ ಗೌರವ (ಪ್ರೈಡ್ ಆಫ್ ಸಿಖ್ ಕಮ್ಯುನಿಟಿ) ವನ್ನು ವಾಪಸ್ ಪಡೆಯಲಾಗಿದೆ.

ಅಕಾಲಿದಳದ ಮುಖಂಡರು ಹಾಗೂ ಲಕ್ಷಾಂತರ ಬೆಂಬಲಿಗರನ್ನು ಹೊಂದಿರುವ ಸುಕ್ಬೀರ್ ಬಾದಲ್ ವ್ಹೀಲ್ ಚೇರ್ ಆಶ್ರಯ ಪಡೆದಿದ್ದಾರೆ. 2015ರ ಸರ್ಕಾರದಲ್ಲಿ ಸಚಿವರಾಗಿದ್ದವರು ಕೂಡಾ ಸ್ವರ್ಣ ಮಂದಿರ ಹಾಗೂ ಗುರುದ್ವಾರದ ಶೌಚಾಲಯ ಸ್ವಚ್ಛಗೊಳಿಸಲು ಸೂಚಿಸಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ವಿಚಾರಣೆಗೆ ಹಿಂದಿನ ದಿನ ಇಡಿ ಪತ್ರ ಬರೆದಿದ್ದೇ ಹೈಕೋರ್ಟ್ ಮೇಲೆ ಪ್ರಭಾವ ಬೀರಲು: ಸಿಎಂ ಸಿದ್ದರಾಮಯ್ಯ ‘ಮಹಾ’ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಆಯ್ಕೆ: ನಾಳೆ ಪ್ರಮಾಣ ವಚನ ಸ್ವೀಕಾರ! ಗೋಲ್ಡನ್ ಟೆಂಪಲ್ ಆವರಣದಲ್ಲಿಯೇ ಪಂಜಾಬ್ ಮಾಜಿ ಡಿಸಿಎಂ ಹತ್ಯೆಗೆ ಯತ್ನ! ಮಹಾರಾಷ್ಟ್ರ ಸಿಎಂ ಹೆಸರು ಘೋಷಿಸದೇ ನಾಳೆ ಪ್ರಮಾಣ ವಚನಕ್ಕೆ ಸಿದ್ಧತೆ! 6,6,6,6,6,6,6: `ಸೂರ್ಯ’ನ ಮುಂದೆ ಶಿವಂ’ ದುಬೆ ರುದ್ರತಾಂಡವ! ಈ ಬಾರಿ ದೇಶದಲ್ಲಿ ಚಳಿಗಾಲದಲ್ಲೂ ಬೀಸಲಿದೆ ಬಿಸಿಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಯುಪಿಯ 3 ಡಿಗ್ರಿ ಪದವೀಧರ! ನಕಲಿ ಗ್ರಾಹಕರ ಸೋಗಿನಲ್ಲಿ ಮೀಶೋ ಕಂಪನಿಗೆ 5.50 ಕೋಟಿಗೆ ವಂಚನೆ: ಮೂವರು ಗುಜರಾತಿಗಳು ಅರೆಸ್ಟ್! ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ಶುಕ್ರವಾರಕ್ಕೆ ಮುಂದೂಡಿಕೆ ಯೂಟ್ಯೂಬ್ ನಲ್ಲಿ ಧರ್ಮ ಪ್ರಚಾರ: ಬಾಂಗ್ಲಾ ವಲಸಿಗರ ವಿರುದ್ಧದ ಚಾರ್ಜ್ ಶೀಟ್ ನಲ್ಲಿ ಬಹಿರಂಗ