Wednesday, November 20, 2024
Google search engine
Homeದೇಶಇಂದು ಮಹಾರಾಷ್ಟ್ರ ಚುನಾವಣೆ: 288 ಸ್ಥಾನಕ್ಕೆ ಕಣಕ್ಕಿಳಿದಿರುವ 4136 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!

ಇಂದು ಮಹಾರಾಷ್ಟ್ರ ಚುನಾವಣೆ: 288 ಸ್ಥಾನಕ್ಕೆ ಕಣಕ್ಕಿಳಿದಿರುವ 4136 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!

ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬುಧವಾರ ನಡೆಯಲಿದ್ದು, 288 ಸ್ಥಾನಗಳಿಗೆ 4136 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಬ್ಭಾಗವಾಗಿರುವ ಎನ್ ಸಿಪಿ ಮತ್ತು ಶಿವಸೇನೆ ಪಕ್ಷಗಳು ಪರಸ್ಪರ ಮುಖಾಮುಖಿ ಸೆಣಸುತ್ತಿವೆ.

ಮಯುತಿ ಮೈತ್ರಿಕೂಟದಲ್ಲಿ ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಪಕ್ಷಗಳು ಸ್ಪರ್ಧಿಸುತ್ತಿದ್ದರೆ, ಮಹಾ ವಿಕಾಸ್ ಅಂಗಡಿ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಪಕ್ಷಗಳು ಸೆಣಸುತ್ತಿವೆ.

288 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಹುಮತ ಪಡೆಯಲು 170 ಸ್ಥಾನಗಳ ಅಗತ್ಯವಿದೆ. ಮೈತ್ರಿಕೂಟಗಳು ಸ್ಪರ್ಧಿಸುತ್ತಿರುವುದರಿಂದ ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಿಲ್ಲವಾಗಿದೆ. ಆದರೆ ಆಡಳಿತಾರೂಢ ಮೈತ್ರಿ ಪಕ್ಷದಲ್ಲಿರುವ ಬಿಜೆಪಿ 149 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಶಿವಸೇನೆ 81 ಮತ್ತು ಎನ್ ಸಿಪಿ 59 ಸ್ಥಾನಗಳಲ್ಲಿ ಕಣಕ್ಕಿಳಿದಿವೆ.

ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ 101, ಕಾಂಗ್ರೆಸ್-ಶಿವಸೇನಾ ಮೈತ್ರಿ ಅಭ್ಯರ್ಥಿ 95 ಕ್ಷೇತ್ರಗಳಲ್ಲಿ ಎನ್ ಸಿಪಿ- 86 ಮತ್ತು ಇತರೆ 7 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಸುಮಾರು 1 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸುವ ಸಾಧ್ಯತೆ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಗ್ಗೂಡಿ ಸ್ಪರ್ಧಿಸಿದ್ದ ಬಿಜೆಪಿ ಮತ್ತು ಶಿವಸೇನೆ ಫಲಿತಾಂಶದ ನಂತರ ಅಧಿಕಾರ ಪಡೆಯುವ ವಿಷಯದಲ್ಲಿ ಮನಸ್ತಾಪ ಮಾಡಿಕೊಂಡು ಬೇರ್ಪಟ್ಟಿದ್ದು, ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ಜೊತೆಗೂಡಿ ಸರ್ಕಾರ ರಚನೆ ಮಾಡಿತ್ತು. ಆದರೆ ಬಿಜೆಪಿ ಆಪರೇಷನ್ ಕಮಲ ಮಾಡಿ ಶಿವಸೇನೆಯನ್ನು ಇಬ್ಭಾಗ ಮಾಡಿ ಏಕನಾಥ್ ಶಿಂಧೆ ನೇತ್ವತ್ವದಲ್ಲಿ ಸರ್ಕಾರವನ್ನು ಪತನಗೊಳಿಸಿ ಹೊಸ ಸರ್ಕಾರ ರಚಿಸಿತು. ನಂತರ ಎನ್ ಸಿಪಿಯನ್ನು ಇಬ್ಭಾಗ ಮಾಡಿ ಅಜಿತ್ ಪವಾರ್ ಬಣವನ್ನು ಸರ್ಕಾರದ ಭಾಗವಾಗಿ ಮಾಡಿಕೊಂಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments