ಮದುವೆ ದಿಬ್ಬಣದಲ್ಲಿ ಬರುತ್ತಿದ್ದ ವಧು-ವರರ ಮೇಲೆ ಸಂಬಂಧಿಕರು 20 ಲಕ್ಷಕ್ಕೂ ಅಧಿಕ ಮೊತ್ತದ ನೋಟುಗಳನ್ನು ಗಾಳಿಯಲ್ಲಿ ತೂರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ವೀಡಿಯೋ ವೈರಲ್ ಆಗಿದೆ.
ಸಿದ್ಧಾರ್ಥ್ ನಗರದಲ್ಲಿ ಈ ಘಟನೆ ನಡೆದಿದ್ದು, ಮನೆಗಳ ಮೇಲೆ ನಿಂತು ಜೆಸಿಯಿಂದ ಹಣದ ನೋಟುಗಳನ್ನು ತೂರಾಡುತ್ತಿರುವ ಹಲವಾರು ವೀಡಿಯೋಗಳು ಹರಿದಾಡುತ್ತಿವೆ.
ಜೆಸಿಬಿ ಮೂಲಕ ಕಟ್ಟಡಗಳ ಮೇಲೇರಿದ ವರನ ಕಡೆಯ ಸಂಬಂಧಿಕರು 100, 200 ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಗಾಳಿಯಲ್ಲಿ ತೂರಾಡಿದ್ದು, ಗ್ರಾಮಸ್ಥರು ನೋಟುಗಳನ್ನು ಸಂಗ್ರಹಿಸಿದ್ದಾರೆ.
ಅಫ್ಜಲ್ ಮತ್ತು ಅರ್ಮಾನ್ ಅವರ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಹಣ ಬಿಸಾಡುವ ಬದಲು ಕೈಗೆ ಕೊಟ್ಟು ಹಂಚಬೇಕಿತ್ತು ಎಂದು ಸಲಹೆ ನೀಡಿದರೆ ಇನ್ನು ಕೆಲವರು ಬಡವರು ಈ ರೀತಿ ಹಣದಿಂದ ಶ್ರೀಮಂತರಾಗಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಹಣದ ಧಿಮಾಕು ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/T_Investor_/status/1858941152956760071