ತಂದೆ-ಮಗಳು ಹಾಗೂ ಸಂಬಂಧಿ ಮೈಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಬಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಸಂಭವಿಸಿದೆ.
ಗೋರಖ್ ಪುರದ ಸೋನಾಬರ್ಸಾ ಮಾರುಕಟ್ಟೆ ಬಳಿ ಭಾನುವಾರ ಸಂಜೆ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ವ್ಯಕ್ತಿ ತೊಟ್ಟಿ ಬಳಿ ಹೋಗುತ್ತಿದ್ದಾಗ ಕರೆಂಟ್ ವಯರ್ ತಗುಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ.
ಸುಮಾರು 11 ಸಾವಿರ ಮೆಗಾವ್ಯಾಟ್ ವಿದ್ಯುತ್ ತಂತಿ ಬೈಕ್ ಗೆ ಸ್ಪರ್ಶಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಮೂವರು ಸ್ಥಳದಲ್ಲೇ ಸಜೀವದಹನಗೊಂಡಿದ್ದಾರೆ. ಸಮೀಪದಲ್ಲಿದ್ದ ಸ್ಥಳೀಯರಿಗೆ ರಕ್ಷಿಸಲು ಕೂಡ ಸಮಯ ಸಿಗಲಿಲ್ಲ ಎಂದು ತಿಳಿದು ಬಂದಿದೆ.
ಕೋತಿಯೊಂದು ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ಅದು ತುಂಡಾಗಿ ಕೆಳಗೆ ಬಿದ್ದಿದ್ದು, ಇದೇ ವೇಳೆ ಬೈಕ್ ನಲ್ಲಿ ಮೂವರು ಆ ಜಾಗಕ್ಕೆ ಬಂದಿದ್ದರಿಂದ ದುರಂತ ಸಂಭವಿಸಿದೆ. ಘಟನೆಯ ತನಿಖೆ ನಡೆಯುತ್ತಿದೆ ಎಂದು ಎಲೆಕ್ಟ್ರಿಸಿಟಿ ಇಲಾಖೆ ಸೂಪರಿಟೆಂಡೆಂಟ್ ಘಟನೆಯನ್ನು ವಿವರಿಸಿದ್ದಾರೆ. ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಮೊತ್ತವನ್ನು ಎಲೆಕ್ಟ್ರಿಸಿಟಿ ಇಲಾಖೆ ಘೋಷಿಸಿದೆ.