Wednesday, May 20, 2026
Google search engine
Homeರಾಜಕೀಯಶೋಕಾಸ್ ನೋಟಿಸ್‍ಗೆ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ: ರಾಧಾಮೋಹನ್ ದಾಸ್ ಅಗ್ರವಾಲ್

ಶೋಕಾಸ್ ನೋಟಿಸ್‍ಗೆ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ: ರಾಧಾಮೋಹನ್ ದಾಸ್ ಅಗ್ರವಾಲ್

ಬೆಂಗಳೂರು: ಶೋಕಾಸ್ ನೋಟಿಸ್‍ಗೆ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗ್ರವಾಲ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ವರ್ಸಸ್ ವಿಜಯೇಂದ್ರ ಅಥವಾ ಯತ್ನಾಳ್ ವರ್ಸಸ್ ಬಿಜೆಪಿ ಎಂಬುದು ಕರ್ನಾಟಕದಲ್ಲಿ ಇಲ್ಲ ಎಂದು ತಿಳಿಸಿದರು.

ಯತ್ನಾಳರಿಗೆ ಒಂದು ಶೋಕಾಸ್ ನೋಟಿಸ್ ಕೊಟ್ಟಿದ್ದು, ಅವರ ಉತ್ತರ ನಿರೀಕ್ಷೆಯಲ್ಲಿದ್ದೇವೆ ಎಂದು ಪತ್ರಕರ್ತರು ಪದೇಪದೇ ಪ್ರಶ್ನಿಸಿದಾಗ ಇದೇ ಉತ್ತರ ನೀಡಿದರು. ಯತ್ನಾಳ್ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಕುರಿತು ಪಕ್ಷ ನಿರ್ಧರಿಸುತ್ತದೆ ಎಂದು ನುಡಿದರು.

ನಾನು ಬಿಜೆಪಿಯ ಬದ್ಧತೆಯುಳ್ಳ ಕಾರ್ಯಕರ್ತ. ಕರ್ನಾಟಕದಲ್ಲಿ ನಮ್ಮ 71 ಲಕ್ಷ ಕಾರ್ಯಕರ್ತರಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಅವರ ವ್ಯಕ್ತಿತ್ವ ಸರಿಯೇ ಅಥವಾ ತಪ್ಪೇ ಎಂಬುದಕ್ಕೆ ಸಮಯವೇ ಉತ್ತರ ಕೊಡಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಪಕ್ಷದ ನಾಯಕತ್ವ ಬದಲಾವಣೆಯ ಅಧಿಕಾರ ತಳಮಟ್ಟದ ಕಾರ್ಯಕರ್ತರ ಅಥವಾ ರಾಷ್ಟ್ರೀಯ ನಾಯಕರ ಬಳಿ ಇದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments