Friday, May 15, 2026
Google search engine
Homeಮನರಂಜನೆದರ್ಶನ್ ಪತ್ನಿ ವಿರುದ್ಧ ಅಶ್ಲೀಲ ಕಮೆಂಟ್: 5 ಯೂಟ್ಯೂಬ್ ವಿರುದ್ಧ ಎಫ್ಐಆರ್

ದರ್ಶನ್ ಪತ್ನಿ ವಿರುದ್ಧ ಅಶ್ಲೀಲ ಕಮೆಂಟ್: 5 ಯೂಟ್ಯೂಬ್ ವಿರುದ್ಧ ಎಫ್ಐಆರ್

ಬೆಂಗಳೂರು:ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ ಐದು ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವಿಜಯಲಕ್ಷ್ಮಿ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದು ಕಾರ್ಯಕ್ರಮ ಮಾಡಿತ್ತು. ಈ ಕಾರ್ಯಕ್ರಮದ ವಿಡಿಯೋಗೆ ಕೆಲವರು ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಮಹಿಳಾ ಆಯೋಗವು ಪೊಲೀಸ್ ಕಮೀಷನರ್‌ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ದೂರು ಪರಿಶೀಲನೆ ನಡೆಸಿದ ಸಿಕೆ ಅಚ್ಚುಕಟ್ಟು ಪೊಲೀಸರು ಬಿಎನ್ ಎಸ್ ಸೆಕ್ಷನ್ 75, 79 ಹಾಗೂ ಐಟಿ ಆ್ಯಕ್ಟ್ 67, 66 ಅಡಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

ಐದು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments