ಡಿಸಿಎಂ ಡಿ.ಕೆ ಶಿವಕುಮಾರ್ ದಂಪತಿ ಗುರುವಾರ ಬೆಳಿಗ್ಗೆ ತಮಿಳುನಾಡಿನ ಖ್ಯತ ಪ್ರತ್ಯಂಗಿನಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ತಮಿಳುನಾಡಿನ ಕುಂಭಕೋಣಂಗೆ ಹೆಲಿಕಾಫ್ಟರ್ ನಲ್ಲಿ ಪತ್ನಿ ಸಹಿತ ತೆರಳಿದ ಡಿಕೆ ಶಿವಕುಮಾರ್ ಕ್ತಿ ಸ್ವರೂಪಿಣಿ, ಉಗ್ರ ಸ್ವರೂಪಿಣಿ ಎಂದೇ ಹೆಸರಾಗಿರುವ ಪ್ರತ್ಯಂಗಿರಾ ದೇವಿ ದರ್ಶನ ಪಡೆದಿದ್ದಾರೆ.
ಡಿಕೆಶಿ ಅವರ ಈ ಭೇಟಿಯು ಕುತೂಹಲದೊಂದಿಗೆ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಸಮಸ್ಯೆ ಪರಿಹಾರಕ್ಕಾಗಿ ದೇವಿ ದರ್ಶನ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಬಗ್ಗೆ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಬ್ರಹ್ಮಾಂಡವನ್ನು ಕಾಲಕಾಲಕ್ಕೆ ರಕ್ಷಿಸಲು ದೇವತೆಗಳು ಮತ್ತು ದೇವರು ವಿವಿಧ ಅವತಾರಗಳನ್ನು ತಾಳಿದ್ದಾರೆ. ಅಂತಹ ಅವತಾರದಲ್ಲಿ ʻಪ್ರತ್ಯಂಗಿರಾ ದೇವಿʼಯ ಅವತಾರವೂ ಒಂದು. ಪ್ರತ್ಯಂಗಿರಾ ದೇವಿಯು ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಣಿ, ಶತ್ರು ಸಂಹಾರಕ್ಕಾಗಿ ಜನಿಸಿ ಬಂದವಳು.
ಈಕೆ ಶಿವ-ವಿಷ್ಣು ಹಾಗೂ ಆದಿಶಕ್ತಿ ಈ ಮೂವರ ಅಂಶವನ್ನು ಹೊಂದಿರುವ ದೇವತೆ ಎಂಬ ನಂಬಿಕೆಯಿದೆ. ಈ ಪ್ರತ್ಯಂಗಿರಾ ದೇವಿಯು ಸಿಂಹದ ಮುಖ ಸ್ತ್ರೀಯ ದೇಹ ಹೊಂದಿದ್ದು ಸಿಂಹವನ್ನೇ ವಾಹನವಾಗಿ ಮಾಡಿಕೊಂಡಿದ್ದಾಳೆ. ಇಂದಿಗೂ ಈ ದೇವಿಯ ಮೇಲೆ ಜನರ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ.