Tuesday, October 6, 2026
Google search engine
Homeಕಾನೂನುಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್ ಗೌಡಗೆ ಷರತ್ತುಬದ್ಧ ಜಾಮೀನು

ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್ ಗೌಡಗೆ ಷರತ್ತುಬದ್ಧ ಜಾಮೀನು

ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಅಮೃತಾ ಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಆರೋಪಿ ರಾಜೀವ್ ಗೌಡಗೆ ಷರತ್ತುಬದ್ಧ ಜಾಮೀನು ಲಭಿಸಿದೆ.

ಮಂಗಳೂರಿನಲ್ಲಿ ಸ್ಥಳ ಮಹಜರು ಮುಗಿಸಿದ ನಂತರ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಶಿಡ್ಲಘಟ್ಟದ ಜೆಎಂಎಫ್​ಸಿ ನ್ಯಾಯಾಲಯ, ರಾಜೀವ್ ಗೌಡನಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

ನ್ಯಾಯಾಧೀಶ ಮೊಹಮ್ಮದ್ ರೋಷ್ ಶಾ, 50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ನೀಡಬೇಕು. ಪೊಲೀಸರ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿದ್ದು, ಜಾಮೀನು ಸಿಕ್ಕ ಖುಷಿಯಲ್ಲಿ ಪಟಾಕಿ ಹಚ್ಚಿ, ಸಂಭ್ರಮಾಚರಣೆ ಸೂಚನೆ ನೀಡಿದ್ದಾರೆ.

ಬ್ಯಾನರ್ ವಿಷಯದಲ್ಲಿ ಪೌರಾಯುಕ್ತೆ ನಿರ್ಮಲಾ ಗೌಡ ಅವರಿಗೆ ಅಶ್ಲೀಲವಾಗಿ ನಿಂದಿಸಿದ ಪ್ರಕರಣದಲ್ಲಿ 14 ದಿನಗಳ ಬಳಿಕ ಕೇರಳ ಗಡಿಯಲ್ಲಿ ರಾಜೀವ್ ಗೌಡ ಅವರನ್ನು ಬಂಧಿಸಲಾಗಿತ್ತು.

ರಾಜೀವ್ ಗೌಡನಿಗೆ ಕೋರ್ಟ್​ ಮೊದಲು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಸ್ಥಳ ಮಹಜರು ಮಾಡಿ ತನಿಖೆ ಮಾಡಬೇಕಿದೆ. ಹೀಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದು, ಇದರ ಮೇರೆಗೆ ಕೋರ್ಟ್ ಎರಡು ದಿನ ರಾಜೀವ್ ಗೌಡನನ್ನು ಪೊಲಿಸ್ ಕಸ್ಟಡಿಗೆ ನೀಡಿತ್ತು.

ಪೊಲೀಸರು ರಾಜೀವ್​ ಗೌಡನನ್ನು ಮಂಗಳೂರಿಗೆ ಕರೆದೊಯ್ದು ಎರಡು ದಿನ ಸ್ಥಳ ಮಹಜರು ಮಾಡಿದ್ದು, ಇಂದು (ಜನವರಿ 30) ಕಸ್ಟಡಿ ಅಂತ್ಯವಾಗಿದ್ದರಿಂದ ರಾಜೀವ್​ ಗೌಡನನ್ನು ಶಿಡ್ಲಘಟ್ಟ ಜಿಎಂಎಫ್​ ಕೋರ್ಟ್​ಗೆ ಹಾಜರುಪಡಿಸಿದರು. ಮತ್ತೊಂದೆಡೆ ರಾಜೀವ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್​ ಪುರಸ್ಕರಿದ್ದು, ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments