Thursday, May 14, 2026
Google search engine
Homeತಾಜಾ ಸುದ್ದಿ10 ವರ್ಷದ ಮಕ್ಕಳು ಸ್ವತಂತ್ರ ಬ್ಯಾಂಕ್ ಖಾತೆ ಹೊಂದಬಹುದು: ಜುಲೈ 1ರಿಂದ ಆರ್ ಬಿಐ ಹೊಸ...

10 ವರ್ಷದ ಮಕ್ಕಳು ಸ್ವತಂತ್ರ ಬ್ಯಾಂಕ್ ಖಾತೆ ಹೊಂದಬಹುದು: ಜುಲೈ 1ರಿಂದ ಆರ್ ಬಿಐ ಹೊಸ ನಿಯಮ

10 ವರ್ಷದ ಮಕ್ಕಳು ಇನ್ನು ಮುಂದೆ ಸ್ವತಂತ್ರವಾಗಿ ಬ್ಯಾಂಕ್ ಖಾತೆ ತೆರೆದು ನಿರ್ವಹಣೆ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮ ಜಾರಿಗೊಳಿಸಿದೆ.

ಆರ್ ಬಿಐ ಏಪ್ರಿಲ್ 21ರಂದು ಹೊರಡಿಸಿದ ಹೊಸ ನಿಯಮ ಪ್ರಕಾರ, ಹೊಸ ನಿಯಮದ ಪ್ರಕಾರ 10 ವರ್ಷ ಮೇಲ್ಪಟ್ಟ ಅಪ್ರಾಪ್ತರು ಕೂಡ ಬ್ಯಾಂಕ್ ಗಳನ್ನು ಉಳಿತಾಯ ಖಾತೆಗಳಲ್ಲಿ ಹಣ ಹೊಂದಬಹುದು.

ಯುವ ಸಮುದಾಯ ಬ್ಯಾಂಕ್ ಖಾತೆ ತೆರೆಯುವ ಮೂಲಕ ಹಣ ನಿರ್ವಹಣೆಯ ಕೌಶಲ್ಯ ಅರಿಯಬಹುದು. ಬ್ಯಾಂಕ್ ಗಳು ಕೂಡ ಈ ಅಪ್ರಾಪ್ತರ ಖಾತೆಗಳನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೇ ಎಂದು ನಿಗಾ ವಹಿಸಬೇಕು ಎಂದು ಆರ್ ಬಿಐ ಸೂಚಿಸಿದೆ.

ಜುಲೈ 1ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಬ್ಯಾಂಕ್ ರಿಸ್ಕ್ ನಿಯಮಗಳ ಅಡಿಯಲ್ಲಿ ಅಪ್ರಾಪ್ತರು ಬ್ಯಾಂಕ್ ಖಾತೆ ತೆರೆಯಬಹುದಾಗಿದೆ. ಯಾವುದೇ ಪೋಷಕರ ನೆರವಿಲ್ಲದೇ ಮಕ್ಕಳು ಖಾತೆ ನಿರ್ವಹಣೆ ಮಾಡಬಹುದು ಎಂದು ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments