ಬೆಂಗಳೂರು: ಖ್ಯಾತ ಸಂಖ್ಯಾಶಾಸ್ತ್ರಜ್ಞ ಪ್ರೊ. ಸುಬ್ಬ ಪಕ್ಕಳ ತಲಪಾಡಿ ಪಂಜಾಳ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
80 ವರ್ಷ (ಕಾರಂತರಪಾಲು ಮನೆಯವರು ತಲಪಾಡಿ) ಖ್ಯಾತ ಸಂಖ್ಯಾಶಾಸ್ತ್ರಜ್ಞ ಬುಧವಾರ ಮುಂಜಾನೆ ತಮ್ಮ ಬೆಂಗಳೂರು ನಿವಾಸದಲ್ಲಿ ನಿಧರಾದರು. ಮಂಗಳೂರಿನ ಕೊಣಾಜೆ ಪರಿಸರದ ಪಿ. ಎ. ಕಾಲೇಜು ಸಮೀಪದ ಅವರ ವೃಂದಾವನ ಮನೆಯಲ್ಲಿ ಸಂಜೆ ಸುಮಾರು 5.30ಕ್ಕೆ ನೆರವೇರವೇರಿತು.
ಪಕ್ಕಳರು ತಮ್ಮ ಕಾಲೇಜು ಜೀವನದ ಅವಧಿಯಲ್ಲೇ ರಾಂಕ್ ವಿದ್ಯಾರ್ಥಿ ಆಗಿದ್ದು, ತಲಪಾಡಿ ದೇವಿಪುರ ಪರಿಸರದಲ್ಲಿ ವಯಸ್ಕರ ಶಿಕ್ಷಣ ತೆರೆದು ಅನೇಕರಿಗೆ ವಿದ್ಯಾರ್ಜನೆ ಮಾಡುತಿದ್ದರು.
1976 ರಿಂದ 1981 ವರೆಗೆ ಮಂಗಳೂರಿನ ಸರಕಾರಿ ಕಾಲೇಜು (ಈವಾಗಿನ ವಿ. ವಿ ಕಾಲೇಜು) ಅಲ್ಲಿ ಉಪಾನ್ಯಾಸಕರಾಗಿ ನಂತರ ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಮತ್ತು ಪ್ರತಿಷ್ಠಿತ ಮಹಾರಾಣಿ ಕಾಲೇಜಿನಲ್ಲಿ ಸೇವೆಸಲ್ಲಿಸಿ ನಂತರದ ದಿನಗಳಲ್ಲಿ ಹೆಬ್ರಿಯ ಸರಕಾರಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ, ಕೊನೆಗೆ ಬೆಂಗಳೂರಿನ ಪದವಿಕಾಲೇಜು ಪ್ರಿನ್ಸಿಪಾಲ್ ಆಗಿ ನಿವೃತ್ತಿ ಹೊಂದಿದ್ದರು. ಲೇಖಕರೂ ಕವಿಗಳು ಅದ ಇವರು ತಮ್ಮ ನಿವೃತ್ತಿ ನಂತರ ಕೂಡ ಹಲವು ಶಾಲಾ ಕಾಲೇಜು ಸಂಘ ಸಂಸ್ಥೆಗಳಿಗೆ ತೆರಲಿ ಸಂಖ್ಯಾ ಶಾಸ್ತ್ರದ ಬಗ್ಗೆ ಉಚಿತ ಶಿಕ್ಷಣ ನೀಡುತಿದ್ದರು.
ಪಕ್ಕಳರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅನೇಕ ಬಂಧು ಮಿತ್ರರು, ಅನೇಕ ವಿದ್ಯಾರ್ಥಿ ಸಮೂಹವನ್ನು ಅಗಲಿರುವರು.
ಸತ್ತ ಮೇಲೆ ಶರೀರ ಬೂದಿಯಾಗಿ ಹೋಗುವುದಕ್ಕಿಂತ ತನ್ನ ಶರೀರದಿಂದ ಇನ್ನೊಬ್ಬರಿಗೆ ಉಪಕಾರ ಸಿಗಲಿ ಎಂಬುವುದು ಅವರ ಅಸೆ ಕೂಡ ಆಗಿದ್ದು ಜೀವಿತ ಅವಧಿಯಲ್ಲೇ ತನ್ನ ಮರಣಾ ನಂತರ ಶರೀರವನ್ನು ದಾನ ಮಾಡುವದಾಗಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರಾರು ಬರೆದಿದ್ದರು. ಅದರಂತೆ ಕುಟುಂಬದ ಸದಸ್ಯರು ಸದಸ್ಯರು ಸಹಕರಿಸುವುದಾಗಿ ತಿಳಿಸಿದ್ದಾರೆ.



