Thursday, November 21, 2024
Google search engine
Homeಜಿಲ್ಲಾ ಸುದ್ದಿಹಕ್ಕುಪತ್ರ ನೀಡದ ಅಂಜುಮನ್ ಇಸ್ಲಾಂ ಹೆಸರಿಗೆ ದಾಖಲಾದ ವಸತಿ ಪ್ರದೇಶ: ಚುನಾವಣೆ ಬಹಿಷ್ಕಾರಿಸಿದ ಶಿಗ್ಗಾವಿ ಕ್ಷೇತ್ರದ...

ಹಕ್ಕುಪತ್ರ ನೀಡದ ಅಂಜುಮನ್ ಇಸ್ಲಾಂ ಹೆಸರಿಗೆ ದಾಖಲಾದ ವಸತಿ ಪ್ರದೇಶ: ಚುನಾವಣೆ ಬಹಿಷ್ಕಾರಿಸಿದ ಶಿಗ್ಗಾವಿ ಕ್ಷೇತ್ರದ ನಿವಾಸಿಗಳು

ಹಾವೇರಿ: ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಜಿಲ್ಲೆಯ ಸವಣೂರಿನ ದಂಡಿನಪೇಟೆ ನಿವಾಸಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕಳೆದ 70-80 ವರ್ಷಗಳಿಂದ ಸುಮಾರು 70-80 ಮನೆಗಳಲ್ಲಿ ಹಿಂದೂ, ಮುಸ್ಲಿಂ ಸೇರಿಕೊಂಡು ವಾಸವಾಗಿದ್ದೇವೆ. ನಾವು ವಾಸವಿರುವ ಈ ಪ್ರದೇಶ ಮೂಲತಃ ಕಂದಾಯ ಭೂಮಿಯಾಗಿದ್ದು, ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಈ ಭೂಮಿಯನ್ನು ಅಂಜುಮನ್ ಇಸ್ಲಾಂ ಸಂಸ್ಥೆಯವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಈ ಕುರಿತು ಕಂದಾಯ ಇಲಾಖೆಯ ತಹಶಿಲ್ದಾರ,  ಎಸಿ, ಡಿಸಿ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರೂ ಹೇಳಿಕೆಗೆ ಮಾತ್ರ ಸರಿಪಡಿಸುವ ಭರವಸೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸತ್ತು ಈ ಬಾರಿ ಹಕ್ಕುಪತ್ರ ನೀಡುವವರೆಗೂ ಮತದಾನಾಡುವುದಿಲ್ಲ ರಂದು ಪಟ್ಟು ಹಿಡಿದಿದ್ದಾಗಿ ತಿಳಿಸಿದರು.

ಈ ವೇಳೆ ಲಕ್ಷ್ಮಿ ಕುಂದಗೋಳ, ಮಾಲತೇಶ ಕುಂದಗೋಳ, ರಜಾಕ ಮಕಾನದಾರ, ರಫೀಕಸಾಬ ಮತ್ತಿತರರು ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments