ನವದೆಹಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಧಿಕೃತ ನಿವಾಸದಲ್ಲಿ ಅವಧಿ ಮೀರಿದ ಅವಧಿಗೂ ಹೆಚ್ಚು ಕಾಲ ವಾಸವಿದ್ದು, ಕೂಡಲೇ ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ಒ ತ್ತಾಯಿಸಿದೆ.
ಆದರೆ ಅಸ್ವಸ್ಥ ಮಗಳು ಮನೆಯಲ್ಲಿಯೇ ಚಿಕಿತ್ಸೆ ನಡೆಯುತ್ತಿದ್ದು, ಆಕೆ ಚೇತರಿಸಿಕೊಳ್ಳುವವರೆಗೂ ಸಮಯವಕಾಶ ನೀಡುವಂತೆ ಮಾಜಿ ಸಿಜೆ ಕೇಳಿಕೊಂಡಿದ್ದಾರೆ.
ಸುಪ್ರೀಂ ಕೋಟರ್್ನಲ್ಲಿ ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಸೇರಿದಂತೆ 33 ನ್ಯಾಯಾಧೀಶರಿದ್ದಾರೆ. ಇದು 34 ನ್ಯಾಯಾಧೀಶರ ಅನುಮೋದಿತ ಬಲಕ್ಕಿಂತ ಒಂದು ಕಡಿಮೆ.
ಸುಪ್ರೀಂ ಕೋರ್ಟ್ ನಾಲ್ವರು ನ್ಯಾಯಾಧೀಶರಿಗೆ ಇನ್ನೂ ಸಕರ್ಾರಿ ವಸತಿ ಹಂಚಿಕೆಯಾಗಿಲ್ಲ. ಅವರಲ್ಲಿ ಮೂವರು ಸುಪ್ರೀಂ ಕೋರ್ಟ್ ತಾತ್ಕಾಲಿಕ ಅಪಾರ್ಟ್ ಮೆಂಟ್ಗಳಲ್ಲಿ ವಾಸಿಸುತ್ತಿದ್ದರೆ, ಒಬ್ಬರು ರಾಜ್ಯ ಅತಿಥಿ ಗೃಹದಲ್ಲಿ ವಾಸಿಸುತ್ತಿದ್ದಾರೆ ಎಂದು ಉನ್ನತ ಮೂಲವೊಂದು ತಿಳಿಸಿದೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನವೆಂಬರ್ 10, 2024ರಂದು ನಿವೃತ್ತರಾದರು. ಸಕರ್ಾರಿ ನಿಯಮಗಳ ಪ್ರಕಾರ, ಸೇವೆಯಲ್ಲಿರುವ ಮುಖ್ಯ ನ್ಯಾಯಮೂರ್ತಿ ತಮ್ಮ ಅಧಿಕಾರಾವಧಿಯಲ್ಲಿ ಟೈಪ್ 8ರ ಬಂಗಲೆಗೆ ಅರ್ಹರಾಗಿರುತ್ತಾರೆ.
ನಿವೃತ್ತಿಯ ನಂತರ, ಅವರು/ಅವಳು ಆರು ತಿಂಗಳವರೆಗೆ ಬಾಡಿಗೆ-ಮುಕ್ತವಾಗಿ ಟೈಪ್ ಸಕರ್ಾರಿ ಬಂಗಲೆಯಲ್ಲಿ ವಾಸಿಸಬಹುದು. ಈ ಪ್ರಕರಣದಲ್ಲಿ, ನ್ಯಾ. ಚಂದ್ರಚೂಡ್ ಅವರು ನಿವೃತ್ತಿಯ ನಂತರ ಸುಮಾರು 8 ತಿಂಗಳ ಕಾಲ ಅದೇ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ಅವರ ಇಬ್ಬರು ಉತ್ತರಾಧಿಕಾರಿಗಳಾದ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು 5, ಕೃಷ್ಣ ಮೆನನ್ ಮಾರ್ಗದ ಬಂಗಲೆಗೆ ಸ್ಥಳಾಂತರಗೊಳ್ಳದಿರಲು ನಿರ್ಧರಿಸಿ ತಮ್ಮ ಹಿಂದಿನ ವಸತಿ ಸೌಕರ್ಯದಲ್ಲಿ ಮುಂದುವರಿದ ಕಾರಣ ಇದು ಸಾಧ್ಯವಾಗಿದೆ.
ಜುಲೈ 1ರಂದು ಸುಪ್ರೀಂ ಕೋಟರ್್ ಆಡಳಿತವು ಬರೆದ ಪತ್ರದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವನ್ನು ಬಂಗಲೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಿದೆ.
“ಮಾನ್ಯ ಡಾ. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಂದ ಕೃಷ್ಣ ಮೆನನ್ ಮಾರ್ಗದ 5ನೇ ಬಂಗಲೆಯನ್ನು ಯಾವುದೇ ವಿಳಂಬವಿಲ್ಲದೆ ಸ್ವಾಧೀನಪಡಿಸಿಕೊಳ್ಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಏಕೆಂದರೆ ವಸತಿ ಅನುಮತಿಯು ಮೇ 31, 2025ರಂದು ಮುಕ್ತಾಯಗೊಂಡಿದೆ. ಜೊತೆಗೆ 2022ರ ನಿಯಮಗಳ ನಿಯಮ 3ಬಿ ನಲ್ಲಿ ಒದಗಿಸಲಾದ ಆರು ತಿಂಗಳ ಅವಧಿಯು ಮೇ 10, 2025ರಂದು ಮುಕ್ತಾಯಗೊಂಡಿದೆ” ಎಂದು ಕೋರ್ಟ್ ಅಧಿಕಾರಿಯು ಸಚಿವಾಲಯದ ಕಾರ್ಯದಶರ್ಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಮಗಳಿಗಾಗಿ ಮನೆ ಐಸಿಯು ಆಗಿದೆ.
ನ್ಯಾಯಮೂತರ್ಿ ಸಂಜೀವ್ ಖನ್ನಾ ನನಗೆ ಏಪ್ರಿಲ್ ವರೆಗೆ ವಿಸ್ತರಣೆಯನ್ನು ನೀಡಿದರು. ಏಪ್ರಿಲ್ ಅಂತ್ಯದಲ್ಲಿ, ನಾನು ಜೂನ್ ವರೆಗೆ ವಿಸ್ತರಣೆ ಕೋರಿ ನ್ಯಾಯಮೂರ್ತಿ ಖನ್ನಾ ಅವರಿಗೆ ಪತ್ರ ಬರೆದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಮಗಳ ಅನಾರೋಗ್ಯವನ್ನು ಉಲ್ಲೇಖಿಸಿ, ಅವರು ಸಕರ್ಾರಕ್ಕೆ ಬಾಡಿಗೆಗೆ ತಾತ್ಕಾಲಿಕ ವಸತಿ ನೀಡುವಂತೆ ಒತ್ತಾಯಿಸಿದರು ಮತ್ತು ಅಗತ್ಯ ದುರಸ್ತಿ ಕಾರ್ಯಗಳು ಪೂರ್ಣಗೊಂಡ ಕೂಡಲೇ ಅವರು ಅಲ್ಲಿಗೆ ಸ್ಥಳಾಂತರಗೊಳ್ಳುವುದಾಗಿ ಹೇಳಿದರು.
“ನಮ್ಮ ಹೆಣ್ಣುಮಕ್ಕಳಿಗೆ ವಿಶೇಷ ಅಗತ್ಯತೆಗಳಿರುವುದರಿಂದ ನಾವು ನಿದರ್ಿಷ್ಟ ಮನೆಯನ್ನು ಹುಡುಕುತ್ತಿದ್ದೆವು. ನಾವು ನಮ್ಮ ಹಿರಿಯ ಮಗಳಿಗಾಗಿ ಐಸಿಯು- ರಚಿಸಿದ್ದೇವೆ ಮತ್ತು ಆದ್ದರಿಂದ ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಮುಕ್ತ ಮಾರುಕಟ್ಟೆಯಲ್ಲಿ ಮನೆಯನ್ನು ಕಂಡುಹಿಡಿಯುವುದು ಕಷ್ಟ. ಆದ್ದರಿಂದ, ಸಕರ್ಾರವು ನನಗೆ ಬಾಡಿಗೆಗೆ ತಾತ್ಕಾಲಿಕ ವಸತಿ ನೀಡಬೇಕೆಂದು ನಾನು ವಿನಂತಿಸಿದೆ,” ಎಂದು ಅವರು ಹೇಳಿದ್ದಾರೆ.



