ಶಿವಮೊಗ್ಗ : ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ಲಯನ್ ಸಫಾರಿಯಲ್ಲಿದ್ದ ಚಿರತೆಯೊಂದನ್ನ ನಂಜಪ್ಪ ಆಸ್ಪತ್ರೆಗೆ ಕರೆತಂದು ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ.
15 ವರ್ಷದ ಭದ್ರ ಎಂಬ ಚಿರತೆಯನ್ನ ಕರೆತಂದು ಚಿಕಿತ್ಸೆ ನೀಡಲಾಗಿದೆ. ವಯೋಸಹಜ ಖಾಯಿಲೆಯಿಂದ ನಾಲ್ಕು ಕಾಲನ್ನ ಚಿರತೆ ಸ್ವಾಧೀನ ಕಳೆದುಕೊಂಡಿರುವ ಬಗ್ಗೆ ಪತ್ತೆ ಮಾಡಲು ಎಂಆರ್ ಐಗೆ ಕರೆತರಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಡಿಎಫ್ಒ ಅಮರಾಕ್ಷರ್ ಭದ್ರ ಚಿರತೆಗೆ ಎಂಆರ್ ಐ ಸ್ಕ್ಯಾನ್ ಮಾಡಿಸಲಾಗಿದೆ. ವರದಿ ಬರಬೇಕಿದೆ, ಚಿರತ ವಯಸ್ಸಾಗಿತ್ತು ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು.
ವಯಸ್ಸಾಗಿರುವ ಕಾರಣಕ್ಕೆ ಚಿರತೆ ಕಾಲು ಕಳೆದುಕೊಂಡಿದೆ. 20 ದಿನಗಳಿಂದ ಈ ಚಿರತೆ ಕುಂಟುತಿತ್ತು. ನಿನ್ನೆಯಿಂದ ಚಿರತೆ ಏಳುತ್ತಿರಲಿಲ್ಲ. ಹಾಗಾಗಿ ಪಶುವೈದ್ಯರು ಸಹಾಯದಿಂದ ಎಂಆರ್ ಐಗೆ ಕರತರಲಾಗಿದೆ ಎಂದರು.



