ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಗೆಳೆಯ ಪಾಲಾಷ್ ಮುಚ್ಚಲ್ ನವೆಂಬರ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ.
ಸ್ಮೃತಿ ಮಂದಾನ ಮತ್ತು ಪಾಲಾಷ್ ಮುಚ್ಚಲ್ ಅವರ ಮದುವೆ ಆಹ್ವಾನ ಪತ್ರಿಕೆ ಸೋರಿಕೆ ಆಗಿದ್ದು, ನವೆಂಬರ್ 20ರಂದು ಇಬ್ಬರೂ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿದೆ.
ಭಾರತ ಮಹಿಳಾ ತಂಡದ ಉಪನಾಯಕಿ ಆಗಿರುವ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಹಾಗೂ ಚಿತ್ರ ನಿರ್ಮಾಪಕ ಪಾಲಾಷ್ ಮುಚ್ಚಲ್ ಮದುವೆ ಆಮಂತ್ರಣ ಪತ್ರಿಕೆ ಸೋರಿಕೆ ಆಗಿದ್ದು, ಸ್ನೇಹಿತರು ಪಾಲಾಷ್ ಮದುವೆ ಆಗುತ್ತಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಅದಕ್ಕೆ ಪಾಲಾಷ್ ರೆಡ್ ಹಾರ್ಡ್ ಎಮೋಜಿ ಹಾಕಿ ಪರೋಕ್ಷವಾಗಿ ಹೌದು ಎಂದು ಒಪ್ಪಿಕೊಂಡಿದ್ದಾರೆ.
ಸ್ಮೃತಿ ಮಂದಾನ ಅಥವಾ ಪಾಲಾಷ್ ಮದುವೆ ಸುದ್ದಿಯ ಬಗ್ಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇಬ್ಬರೂ ಮದುವೆ ವಿಷಯವನ್ನು ಕೊನೆಯ ಗಳಿಗೆಯಲ್ಲಿ ಬಹಿರಂಗಪಡಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.



