Friday, May 17, 2024
Google search engine
Homeಜ್ಯೋತಿಷ್ಯವ್ಯಾಪಾರ-ವ್ಯವಹಾರದಲ್ಲಿ ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದರೆ, ಈ ಕೆಳಕಂಡ ತಂತ್ರಗಳನ್ನು ಅನುಸರಿಸಿ!

ವ್ಯಾಪಾರ-ವ್ಯವಹಾರದಲ್ಲಿ ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದರೆ, ಈ ಕೆಳಕಂಡ ತಂತ್ರಗಳನ್ನು ಅನುಸರಿಸಿ!

ವ್ಯಾಪಾರದಲ್ಲಿ ನಿರಂತರವಾಗಿ ನಷ್ಟವಾಗುತ್ತಿದ್ದರೆ ಗಾಯಿತ್ರಿ ಹವನ ಮಾಡಿಸಬೇಕು. ಹವನದ ವಿಭೂತಿಯನ್ನು ಶುದ್ಧವಾದ ಬಿಳಿವಸ್ತ್ರದಲ್ಲಿ ಗಂಟು ಕಟ್ಟಿ ವ್ಯಾಪಾರದ ಸ್ಥಾನದಲ್ಲಿ ಸ್ಥಾಪಿಸುವುದರಿಂದ ವ್ಯಾಪಾರದಲ್ಲಿ ನಷ್ಟ ಕಡಿಮೆಯಾಗಿ ಲಾಭದತ್ತ ಕೊಂಡೊಯ್ಯುತ್ತದೆ.

ಅಂಗಡಿ ಅಥವಾ ಕರ‍್ಯಾಲಯ ಲಾಭದಲ್ಲಿ ನಡೆಯುತ್ತಿಲ್ಲವೆಂದರೆ ಅಂಗಡಿ ಅಥವಾ ಕರ‍್ಯಾಲಯದ ಮುಖ್ಯದ್ವಾರದಲ್ಲಿ ಹುಣಸೇಗಿಡದ ಕಟ್ಟಿಗೆಯಿಂದ ಸಿದ್ಧಪಡಿಸಿದ ಗೂಟವನ್ನು ಬಡಿಯುವುದರಿಂದ ಅಂಗಡಿ ಅಥವಾ ಕಾರ‍್ಯಾಲಯ ಲಾಭದಿಂದ ಸಾಗುತ್ತದೆ.

ಶನಿವಾರದಂದು ಎಂಟು ವಿಳ್ಯೇದೆಲೆ ಮತ್ತು ಐದು ಅರಳೀ ವೃಕ್ಷದ ಎಲೆಗಳನ್ನು ತಂದು ಎರಡನ್ನೂ ಸೇರಿಸಿ ಕೆಂಪುವರ್ಣದ ದಾರದಿಂದ ಕಟ್ಟಿ ವ್ಯಾಪಾರ ಸ್ಥಳದ ಪೂರ್ವದಿಕ್ಕಿನಲ್ಲಿ ಕಟ್ಟಬೇಕು. ಇದರಿಂದ ವ್ಯಾಪಾರ ದಿನೇದಿನೇ ಅಭಿವೃದ್ಧಿಯಾಗುತ್ತದೆ.

ಒಂಭತ್ತು ಕವಡೆ ಅಥವಾ ಗಲ್ಲಾಪೆಟ್ಟಿಗೆಯಲ್ಲಿ ಒಂದು ತಾಮ್ರದ ನಾಣ್ಯವನ್ನು ಸ್ಥಾಪಿಸಿದರೆ ಅಂಗಡಿಯ ವ್ಯಾಪಾರ ಲಾಭದಾಯಕವಾಗಿರುತ್ತದೆ.

ಪ್ರತಿ ಶುಕ್ರವಾರದಂದು ನಿಂಬೆಹಣ್ಣನ್ನು ಕತ್ತರಿಸಿ ಅಂಗಡಿ ಅಥವಾ ಕಾರ್ಖಾನೆಯ ಮಣ್ಣಿನ ನೆಲದಲ್ಲಿ ಹಾಕುವುದರಿಂದ ಎಲ್ಲಾ ವಿಧದ ಸಮಸ್ಯೆಗಳು ದೂರಾಗಿ ಉತ್ಪಾದನೆ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ.

ನೂಲಿನ ದಾರವನ್ನು ತೆಗೆದುಕೊಂಡು ಅದಕ್ಕೆ ಕೇಸರಿ ಬಣ್ಣವನ್ನು ಹಚ್ಚಿ, ಅದರ ಮೇಲೆ ‘ಓಂ ಮಹಾಲಕ್ಷೆö್ಮöÊ ನಮಃ’ ಈ ಮಂತ್ರವನ್ನು ೧೦೮ ಬಾರಿ ಪಠಿಸಿ ಅಭಿಮಂತ್ರಿತಗೊಳಿಸಬೇಕು. ನಂತರ ಅದನ್ನು ವ್ಯಾಪಾರ ಸ್ಥಳದಲ್ಲಿ ಕಟ್ಟಬೇಕು. ಇದರ ಪ್ರಭಾವದಿಂದ ವ್ಯಾಪಾರ ವೃದ್ಧಿಯಾಗುತ್ತದೆ.

ಶನಿವಾರ ಅಥವಾ ಮಂಗಳವಾರದAದು ಮಧ್ಯಾಹ್ನದ ವೇಳೆ ಶುದ್ಧವಾದ ಜಲದಲ್ಲಿ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಕರಗಲು ಬಿಡಬೇಕು. ಸಂಜೆಯಾದ ನಂತರ ಉಪ್ಪು ಮಿಶ್ರಿತ ಜಲವನ್ನು ವ್ಯಾಪಾರದ ಸ್ಥಳ ಅಥವಾ ಕಾರ್ಖಾನೆಯಲ್ಲಿ ಪ್ರೋಕ್ಷಣೆ ಮಾಡಬೇಕು. ಇದನ್ನು ನಿಯಮಿತವಾಗಿ ಮೇಲೆ ತಿಳಿಸಿದ ವಾರಗಳಂದು ಮಾಡುತ್ತಾ ಬಂದರೆ, 4-6 ವಾರಗಳಲ್ಲೇ ಶುಭಫಲ ಕಾಣಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments