Saturday, May 18, 2024
Google search engine
Homeತಾಜಾ ಸುದ್ದಿಕರ್ನಾಟಕದಲ್ಲಿ ಏಪ್ರಿಲ್ 26, ಮೇ 7ಕ್ಕೆ ಮತದಾನ: 1 ವಿಧಾನಸಭೆಗೂ ಉಪ ಚುನಾವಣೆ

ಕರ್ನಾಟಕದಲ್ಲಿ ಏಪ್ರಿಲ್ 26, ಮೇ 7ಕ್ಕೆ ಮತದಾನ: 1 ವಿಧಾನಸಭೆಗೂ ಉಪ ಚುನಾವಣೆ

ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಇದೇ ವೇಳೆ ಒಂದು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯೂ ನಡೆಯಲಿದೆ.

ಕೇಂದ್ರ ಚುನಾವಣಾ ಆಯೋಗದ ಅಧಿಕಾರಿ ರಾಜೀವ್ ಕುಮಾರ್ ಶನಿವಾರ ಲೋಕಸಭಾ ಚುನಾವಣೆಯ ದಿನಾಂಕ ಘೋಷಿಸಿದ್ದು, ಈ ಬಾರಿ ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಕಾಂಗ್ರೆಸ್ ಶಾಸಕರ ನಿಧನದಿಂದ ತೆರವಾದ ಶರಾಪೂರ್ ಕ್ಷೇತ್ರದ ಉಪ ಚುನಾವಣೆ ಮೇ 7ರಂದು ನಡೆಯಲಿದೆ.

ಎರಡನೇ ಹಂತ ಅಂದರೆ ಏಪ್ರಿಲ್ 26ರಂದು ನಡೆಯಲಿರುವ ರಾಜ್ಯದಲ್ಲಿನ ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ಹಾಸನ, ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡದಲ್ಲಿ ಮತದಾನ ನಡೆಯಲಿದೆ.

ಮೇ 7ರಂದು ನಡೆಯುವ ಎರಡನೇ ಹಂತದ ಅಂದರೆ ಒಟ್ಟಾರೆ ಮೂರನೇ ಹಂತದಲ್ಲಿ ಬೀದರ್, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗದಲ್ಲಿ ಮತದಾನ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments