Sunday, December 7, 2025
Google search engine
Homeಕ್ರೀಡೆCricket ವರ್ಷದ ಕ್ರಿಕೆಟಿಗ ರೇಸಲ್ಲಿ ಬುಮ್ರಾ ಸೇರಿ 5 ಕ್ರಿಕೆಟಿಗರು!

Cricket ವರ್ಷದ ಕ್ರಿಕೆಟಿಗ ರೇಸಲ್ಲಿ ಬುಮ್ರಾ ಸೇರಿ 5 ಕ್ರಿಕೆಟಿಗರು!

ದುಬೈ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡಿನ ರನ್ ಮೆಷಿನ್‌ಗಳಾದ ಹ್ಯಾರಿ ಬ್ರೂಕ್, ಜೋ ರೂಟ್ ಮತ್ತು ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್ ಮನ್ ಟ್ರಾವಿಸ್ ಹೆಡ್ ಅವರನ್ನು ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಗೆ ಸೂಚಿಸಲಾಗಿದೆ.

ಭಾರತದ ವೇಗದ ಬೌಲರ್ ಬುಮ್ರಾ ಎಲ್ಲಾ ಸ್ವರೂಪಗಳಲ್ಲಿ ಸ್ಪೂರ್ತಿದಾಯಕ ಪ್ರದರ್ಶನ ನೀಡಿದ್ದೇ ಅಲ್ಲದೇ ತಮ್ಮ ತಂಡಕ್ಕೆ ಎರಡನೇ ಐಸಿಸಿ ಪುರುಷರ ಟಿ-20 ವಿಶ್ವಕಪ್ ಪ್ರಶಸ್ತಿ ಸೇರಿದಂತೆ ಸ್ಮರಣೀಯ ವಿಜಯಗಳಿಗೆ ಮಾರ್ಗದರ್ಶನ ನೀಡಿದರು.

2024ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ನಲ್ಲಿ 2 ವಿಕೆಟ್ ಸೇರಿದಂತೆ ಒಟ್ಟಾರೆ 8 ಪಂದ್ಯಗಳಿಂದ 15 ವಿಕೆಟ್‌ಗಳನ್ನು ಪಡೆದರು.

ಬಲಗೈ ವೇಗಿ ಈ ವರ್ಷ ಸುದೀರ್ಘ ಸ್ವರೂಪದಲ್ಲಿ ನಂಬಲಾಗದ ಅಂಕಿ-ಸಂಖ್ಯೆ ಹೊಂದಿದ್ದಾರೆ. 13 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ 71 ವಿಕೆಟ್ ಕಬಳಿಸಿದ್ದಾರೆ.

ಹ್ಯಾರಿ ಬ್ರೂಕ್ ಕಳೆದ ವರ್ಷದಲ್ಲಿ ದೀರ್ಘ ಸ್ವರೂಪದಲ್ಲಿ ಇಂಗ್ಲೆಂಡ್‌ನ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. 22ರ ವಯಸ್ಸಿನ ಬ್ರೂಕ್ ಹೊಡಬಡಿ ಆಟ್ ಧ್ವಜಧಾರಿಯಾಗಿದ್ದಾರೆ.

ಟೆಸ್ಟ್ ಬ್ಯಾಟರ್ ಆಗಿ ತನ್ನ ನಿಷ್ಕಳಂಕ ಪರಂಪರೆಯನ್ನು ಮುಂದುವರಿಸಿರುವ ಜೋ ರೂಟ್ ೨೦೨೪ರಲ್ಲಿ ಹೊಸ ಎತ್ತರಕ್ಕೆ ಏರಿದರು. ಇಂಗ್ಲೆಂಡ್‌ನ ಅನುಭವಿ ಆಟಗಾರ ತಮ್ಮ ವೃತ್ತಿಜೀವನದಲ್ಲಿ ೫ನೇ ಬಾರಿಗೆ ವರ್ಷದಲ್ಲಿ ೧೦೦೦ಕ್ಕೂ ಹೆಚ್ಚು ರನ್ ಗಳಿಸಿದರು.

ಆಸ್ಟ್ರೇಲಿಯಾದ ಮುಂಚೂಣಿ ಟ್ರಾವಿಸ್ ಹೆಡ್ ಬ್ಯಾಟಿನೊಂದಿಗೆ ಕಳೆದ ವರ್ಷದಂತೆಯೇ ಈ ವರ್ಷವೂ ಹೇರಳವಾಗಿ ರನ್ ಗುಡ್ಡೆ ಕಲೆಹಾಕಿ ತಂಡದ ವಿಜಯಗಳಲ್ಲಿ ಪ್ರಧಾನ ಪಾತ್ರ ವಹಿಸಿದರು.

ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಎಡಗೈ ಬ್ಯಾಟರ್ ಚುಟುಕು ಸ್ವರೂಪದಲ್ಲಿ ಸಹ ಮಿಂಚಿನ ಸಂಚಾರ ಮೂಡಿಸಿದರು. ಅವರು ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments