Saturday, July 27, 2024
Google search engine
Homeಕ್ರೀಡೆಫ್ರೆಂಚ್ ಓಪನ್ ಮೊದಲ ಸುತ್ತಿನಲ್ಲೇ ಸೋಲುಂಡ 14 ಬಾರಿಯ ಚಾಂಪಿಯನ್ ರಾಫೆಲ್ ನಡಾಲ್!

ಫ್ರೆಂಚ್ ಓಪನ್ ಮೊದಲ ಸುತ್ತಿನಲ್ಲೇ ಸೋಲುಂಡ 14 ಬಾರಿಯ ಚಾಂಪಿಯನ್ ರಾಫೆಲ್ ನಡಾಲ್!

14 ಬಾರಿ ಪ್ರಶಸ್ತಿ ಗೆದ್ದು ಆವೆ ಅಂಕಣದ ರಾಜ ಎಂದೇ ಖ್ಯಾತಿ ಪಡೆದಿದ್ದ ಸ್ಪೇನ್ ನ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲುಂಡಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಾಜಿ ಚಾಂಪಿಯನ್ ರಾಫೆಲ್ ನಡಾಲ್ 3-6, 6-7, 3-6 ಸೆಟ್ ಗಳಿಂದ 4ನೇ ಶ್ರೇಯಾಂಕಿತ ಜರ್ಮನಿಯ ಅಲೆಗ್ಸಾಂಡರ್ ಜ್ವುರೆವ್ ವಿರುದ್ಧ ಸೋಲುಂಡರು.

ರಾಫೆಲ್ ನಡಾಲ್ ವೃತ್ತಿಜೀವನದಲ್ಲಿ ಮೂರನೇ ಬಾರಿ ಗ್ರ್ಯಾನ್ ಸ್ಲಾಮ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲುಂಡಿದ್ದಾರೆ. ಗಾಯದ ನಂತರ ಚೇತರಿಸಿಕೊಂಡು ವೃತ್ತಿಪರ ಟೆನಿಸ್ ಗೆ ಮರಳಿದ್ದ ನಡಾಲ್ ಈ ಟೂರ್ನಿ ನಂತರ ಟೆನಿಸ್ ಗೆ ನಿವೃತ್ತಿ ಹೇಳುತ್ತಾರೆ ಎಂಬ ವದಂತಿ ಹರಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments