ಒಂದೇ ಪಂದ್ಯದಲ್ಲಿ ಹ್ಯಾಟ್ರಿಕ್ ಜೊತೆ ಎಲ್ಲಾ 10 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆಗೆ ಬಿಹಾರದ ಸುಮನ್ ಕುಮಾರ್ ಪಾತ್ರರಾಗಿದ್ದಾರೆ.
ಕೂಚ್ ಬಿಹಾರ್ ಟ್ರೋಫಿಗಾಗಿ ಪಾಟ್ನಾದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಹಾರ ತಂಡದ ಪರ ಆಡಿದ ಸುಮನ್ ಕುಮಾರ್, ರಾಜಸ್ಥಾನ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.
ಸುಮನ್ ಕುಮಾರ್ 33.5 ಓವರ್ ಬೌಲಿಂಗ್ ಮಾಡಿದ್ದು, 20 ಮೇಡನ್ ಮಾಡಿ 53 ರನ್ ನೀಡಿ 10 ವಿಕೆಟ್ ಗಳಿಸಿದರು.
ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು. ಅಲ್ಲದೇ ಕೂಚ್ ಬಿಹಾರ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು.
ಸುಮಾನ್ ಮಾರಕ ದಾಳಿ ನೆರವಿನಿಂದ ಬಿಹಾರ ತಂಡ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಪಡೆದಿದ್ದಕ್ಕಾಗಿ 3 ಅಂಕ ಪಡೆಯಿತು.
ಬಿಹಾರ ಮೊದಲ ಇನಿಂಗ್ಸ್ ನಲ್ಲಿ 143.4 ಓವರ್ ಗಳಲ್ಲಿ 467 ರನ್ ಗಳಿಸಿತು. ರಾಜಸ್ಥಾನ್ ಸುಮನ್ ದಾಳಿಗೆ ತತ್ತರಿಸಿ 410 ರನ್ ಆಲೌಟಾಯಿತು. ಪರ್ಥ್ ಯಾದವ್ ತಂಡದ ಪರ 441 ಇನಿಂಗ್ಸ್ ನಲ್ಲಿ 200 ರನ್ ಗಳಿಸಿದರು.