ಮುಂಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ವೇದಿಕೆ ಸಿದ್ಧವಾಗಿದ್ದು, ಭಾರತ ಕ್ರಿಕೆಟ್ ತಂಡ ತಮ್ಮ ದಂಡನ್ನು ಆಖೈರು ಮಾಡುವ ಪ್ರಕ್ರಿಯೆಯಲ್ಲಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಗೆ ಇದು ಕೊನೆಯ ಟೆಸ್ಟ್ ಆಗುವ ಸಾಧ್ಯತೆ ಇದೆ.
ಬಹುತೇಕ ಆಟಗಾರರು ಈಗಾಗಲೇ ತಮ್ಮ ಟವೆಲ್ ಹಾಸಿದ್ದು ಉಳಿದಿರುವ ಓರ್ವ ಸ್ಪಿನ್ನರ್ ಆಯ್ಕೆಗೆ ಭಾರೀ ಪೈಪೋಟಿ ಎದುರಾಗಿದೆ. ಸ್ಪೆಷಲಿಸ್ಟ್ ಸ್ಪಿನ್ನರ್ ಹುದ್ದೆಗೆ ಮೂವರು ಅರ್ಹ ಅಭ್ಯರ್ಥಿಗಳಿದ್ದಾರೆ. ಈ ಮೂವರಲ್ಲಿ ಯಾರನ್ನು ಮತ್ತು ಏಕೆ ಅವರನ್ನೇ ಆಯ್ಕೆ ಮಾಡಬೇಕು ಎಂಬುದೇ ಅಯ್ಕೆ ಸಮಿತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಭಾರತವು ಎರಡು ಸ್ಪಿನ್ ಆಯ್ಕೆಗಳೊಂದಿಗೆ ದುಬೈಗೆ ತೆರಳಲಿದೆ. ರವೀಂದ್ರ ಜಡೇಜಾ ಸ್ವಯಂಚಾಲಿತ ಆಯ್ಕೆಯಾಗಿದ್ದು, ಒಂದು ಸ್ಥಾನ ಮಾತ್ರ ಖಾಲಿ ಬೀಳಲಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿರುವ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗುವ ಸಾಧ್ಯತೆ ಇದ್ದು, ಇದು ಅವರ ಬೀಳ್ಕೊಡುಗೆ ಟ್ರೋಫಿ ಆಗಲಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮ ಅವರನ್ನು ಆಸ್ಟ್ರೇಲಿಯಾ ಸರಣಿಯ ಕೊನೆಯ ಪಂದ್ಯದಿಂದ ಹೊರಗುಳಿದರೆ, ಕೊಹ್ಲಿ ವಿಫಲರಾಗಿದ್ದರೂ ಅವಕಾಶ ನೀಡಲಾಗಿದ್ದು, ಬಿಸಿಸಿಐ ಆಯ್ಕೆ ಸಮಿತಿ ನಿವೃತ್ತಿ ನಿರ್ಧಾರದ ಕುರಿತು ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಸ್ಪಿನ್ನರ್ ಒಂದು ಸ್ಥಾನಕ್ಕೆ ಮೂರು ಆಯ್ಕೆಗಳಿವೆ. ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಆಲ್ರೌಂಡ್ ಸಾಮರ್ಥ್ಯವನ್ನು ತಂದರೆ. ಸ್ಪೆಷಲಿಸ್ಟ್ ಆಗಿ ಕುಲದೀಪ್ ತಂಡಕ್ಕೆ ದೊಡ್ಡ ಲಾಭ ಆಗಲಿದ್ದಾರೆ.
ಎರಡನೇ ಸ್ಪಿನ್ನರ್ ಅನ್ನು ಆಯ್ಕೆ ಮಾಡುವುದು ನಾಯಕನಿಗೆ ಮಾತ್ರವಲ್ಲ, ಕೋಚ್ಗೂ ಬಹಳ ಕಷ್ಟದ ಕೆಲಸವಾಗಿದೆ. ಕುಲ್ದೀಪ್ ಅದ್ಭುತ ಸ್ಪಿನ್ನರ್ ಆಗಿದ್ದರೆ, ವಾಷಿಂಗ್ಟನ್ ಮತ್ತು ಅಕ್ಷರ್ ಜೋಡಿ ಬ್ಯಾಟ್ ಬೀಸಲು ಹೊಂಜರಿಯದ ಕಾರಣ ಅವರನ್ನೂ ಕಡೆಗಣಿಸುವ ಹಾಗಿಲ್ಲ. ಆದ್ದರಿಂದ, ಭಾರತವು ತಮ್ಮ ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವಾಗ ಎದುರಾಳಿಯ ಬಲಾಬಲದ ಆಧಾರದ ಮೇಲೆ ಕಾರ್ಯತಂತ್ರವನ್ನು ಹೊಂದಿರಬೇಕು.
ತಜ್ಞ ಬೌಲರ್ ಎಂದು ಬಂದರೆ ವಾಶಿ ಮತ್ತು ಅಕ್ಷರ್‌ಗಿಂತ ಕುಲದೀಪ್ ನಿಸ್ಸಂಶಯವಾಗಿ ಮೊದಲ ಆಯ್ಕೆ ಆಗುವ ಸ್ಥಾನದಲ್ಲಿದ್ದಾರೆ. ಭಾರತವು ಬ್ಯಾಟಿಂಗ್‌ನಲ್ಲಿ ಉತ್ತಮವಾದ ಅಗ್ರ ಮತ್ತು ಮಧ್ಯಮ ಕ್ರಮಾಂಕವನ್ನು ಹೊಂದಿದೆ. ಹೀಗಾಗಿ ಬ್ಯಾಟ್ ಬೀಸುವ ಸ್ಪಿನ್ನರ್‌ಗಳು ಬೋನಸ್ ಆಗುತ್ತಾರೆ.
30 ವರ್ಷದ ಅಕ್ಷರ್ ತಂಡದಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸುವ ಎರಡನೇ ಆಟಗಾರರಾಗಿದ್ದಾರೆ. ಅವರು 60 ಪಂದ್ಯಗಳಿಂದ 64 ವಿಕೆಟ್ ಗಳನ್ನು ಪಡೆದ ಅನುಭವವನ್ನು ಹೊಂದಿದ್ದಾರೆ.
ಭಾರತಕ್ಕೆ ಪಂದ್ಯವನ್ನು ಮುಗಿಸಬಲ್ಲ ಕಠಿಣ ಆಟಗಾರನ ಅಗತ್ಯವಿದ್ದರೆ, ವಾಷಿಂಗ್ಟನ್ ಸುಂದರ್‌ಗಿಂತ ಅಕ್ಷರ್ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ. ಅಕ್ಷರ್ ಸಣ್ಣ ಇನ್ನಿಂಗ್ಸ್ ಗಳನ್ನು ಆಡಬಹುದು ಮತ್ತು ಅತ್ಯಂತ ಪರಿಣಾಮಕಾರಿಯಾಗಬಹುದು.
ಮತ್ತೊಂದೆಡೆ, ವಾಶಿ ದೊಡ್ಡ ಹೊಡೆತಗಳನ್ನು ಹೊಡೆಯಬಹುದು ಆದರೆ ಸ್ವಲ್ಪ ದೀರ್ಘ ಇನ್ನಿಂಗ್ಸ್ ಆಡುವ ಸಾಧ್ಯತೆ ಹೆಚ್ಚು.
ವಾಷಿಂಗ್ಟನ್ ಸುಂದರ್ ಬಗ್ಗೆ ಹೇಳುವುದಾದರೆ, ಅವರು ಇಡೀ ತಂಡದಲ್ಲಿ ಏಕೈಕ ಆಫ್ ಸ್ಪಿನ್ನರ್ ಆಗಿದ್ದಾರೆ. ೨೨ ಏಕದಿನ ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಅವರು ಸಹ ಬ್ಯಾಟಿನೊಂದಿಗೆ ಉಪಯುಕ್ತರಾಗಿದ್ದಾರೆ ಮತ್ತು ನಿಯಮಿತವಾಗಿ ವಿಕೆಟ್ ಕೀಳುತ್ತಾರೆ. ಆದರೆ ಅವರು ಕಂತೆಗೆ ತಕ್ಕ ಬೊಂತೆ ಎಂಬ ಆಯ್ಕೆಯಾಗಿದ್ದಾರೆ.
ರೋಹಿತ್, ಕೊಹ್ಲಿಗಿಲ್ಲ ವಿಶ್ರಾಂತಿ
ಈ ಮಧ್ಯೆ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ವಿನಾಯ್ತಿ ನೀಬಹುದು ಎಂಬ ಲೆಕ್ಕಾಚಾರ ತಲೆಕೆಳಗಗಿದೆ.
ತೀವ್ರ ವೈಫಲ್ಯದ ಸುಳಿಯಲ್ಲಿ ಮುಳುಗಿರುವ ಈ ಇಬ್ಬರೂ ಆಟಗಶರರು ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಲಯಕ್ಕೆ ಬರಲು ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲೇಬೇಕು ಎಂದು ಕೋಚ್ ಗೌತಮ್ ಗಂಭೀರ್ ಹಠಕ್ಕೆ ಬಿದ್ದಿದ್ದಾರೆ.
ಗಂಭೀರ್ ಅವರ ನಿಲುವಿಗೆ ಬಿಸಿಸಿಐ ಸಹ ಸಮ್ಮತಿ ಸೂಚಿಸಿದೆ ಎನ್ನಲಾಗುತ್ತಿದ್ದು, ಹಾಗಾದಲ್ಲಿ ಕೊಹ್ಲಿ ಮತ್ತು ವಿರಾಟ್ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವುದು ಅನಿವಾರ್ಯ ಆಗುತ್ತದೆ.
ಇನ್ನು ಆಸ್ಟ್ರೇಲಿಯಾ ವಿರುದ್ಧ ದೈತ್ಯ ಪ್ರದರ್ಶನ ನೀಡಿದ ವೇಗಿ ಜಸ್ಪ್ರೀತ್ ಬುಮ್ರಾಗೆ ಇಂಗ್ಲೆಂಡ್ ಸರಣಿಯಿಂದ ವಿಶ್ರಾಂತಿ ನೀಡುವುದು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದೆ.