ಭಾರತ ಮತ್ತು ಪಾಕಿಸ್ತಾನ ಆಟಗಾರರು ಸುಲ್ತಾನ್ ಆಫ್ ಜೋಹಾರ್ ಕಪ್ ಹಾಕಿ ಪಂದ್ಯದಲ್ಲಿ 3-3 ಗೋಲಿನಿಂದ ಸಮಬಲ ಸಾಧಿಸಿದ ನಂತರ ಹಸ್ತಲಾಘವ ಮಾಡಿ ಗಮನ ಸೆಳೆದಿದ್ದಾರೆ.
ಮಲೇಷ್ಯಾದ ಜೊಹರ್ ಬಹ್ರುನ ತಮಾಮ್ ದೈಾ ಹಾಕಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳು ಜಿದ್ದಾಜಿದ್ದಿನ ಹೋರಾಟದ ನಂತರ ಸಮಬಲದಲ್ಲಿ ಅಂತ್ಯಗೊಂಡಿತು.
ಒಂದು ಹಂತದಲ್ಲಿ 0-2 ಗೋಲುಗಳಿಂದ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ಕೊನೆಯ ಹಂತದಲ್ಲಿ ಅಮೋಘವಾಗಿ ಚೇತರಿಸಿಕೊಂಡು ಮೇಲುಗೈ ಸಾಧಿಸಿತು. ಈ ಮೂಲಕ ಭಾರತೀಯ ಆಟಗಾರರು ಗಮನ ಸೆಳೆದರೂ ಗೆಲುವಾಗಿ ಪರಿವರ್ತಿಸಿಕೊಳ್ಳಲು ವಿಫಲರಾದರು.
ಅರ್ಜಿತ್ ಸಿಂಗ್ ಹುಂಡಲ್ ಮೂರನೇ ಕ್ವಾರ್ಟರ್ ನಲ್ಲಿ ಪೆನಾಲ್ಟಿ ಸ್ಟ್ರೋಕ್ ನಲ್ಲಿ ಗೋಲು ಬಾರಿಸಿದರು. ನಂತರ ಸೌರಭ್ ಆನಂದ್ ಖುಷ್ವಾಹ್ ಮತ್ತೊಂದು ಗೋಲು ಸಿಡಿಸಿ ಭಾರತಕ್ಕೆ ಸಮಬಲದ ಗೌರವ ತಂದುಕೊಟ್ಟರು.
ಮನ್ ಮೀತ್ ಸಿಂಗ್ ಮೂರನೇ ಗೋಲು ಸಿಡಿಸಿ ಮುನ್ನಡೆ ತಂದುಕೊಟ್ಟಿದ್ದೂ ಅಲ್ಲದೇ ಮೇಲುಗೈ ತಂದುಕೊಟ್ಟು ಗೆಲುವಿನ ಭರವಸೆ ಮೂಡಿಸಿದರು. ಪಂದ್ಯದ ಕೊನೆಯ ಕ್ಷಣದಲ್ಲಿ ಪಾಕಿಸ್ತಾನ ಗೋಲು ಬಾರಿಸಿ ಹಿನ್ನಡೆ ತಪ್ಪಿಸಿಕೊಂಡಿದ್ದೂ ಅಲ್ಲದೇ ಸೋಲಿನ ಭೀತಿಯಿಂದ ಪಾರಾಯಿತು.


