Saturday, October 24, 2026
Google search engine
Homeರಾಜ್ಯಸ್ಟಿಂಗ್ ಆಪರೇಷನ್: ದೆಹಲಿಯ ರಿತೇಶ್ ಬೆಳಿಗ್ಗೆ ಬಂಧನ, ಸಂಜೆ ಬಿಡುಗಡೆ

ಸ್ಟಿಂಗ್ ಆಪರೇಷನ್: ದೆಹಲಿಯ ರಿತೇಶ್ ಬೆಳಿಗ್ಗೆ ಬಂಧನ, ಸಂಜೆ ಬಿಡುಗಡೆ

ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ದೆಹಲಿ ಮೂಲದ ರಿತೇಶ್ ಎಂಬಾತನನ್ನು ಸಿಸಿಬಿ ಪೊಲೀಸರು ಬೆಳಿಗ್ಗೆ ಬಂಧಿಸಿದರೆ, ಸಂಜೆ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆ ಮಾಡಿದೆ.

ಸ್ಟಿಂಗ್ ಆಪರೇಷನ್ ನಡೆಸುವ ಉದ್ದೇಶದಿಂದಲೇ ರಿತೇಶ್ ಸೆಕೆಂಡ್‌ ಹ್ಯಾಂಡ್ ಮೊಬೈಲ್ ಫೋನ್ ಖರೀದಿಸಿದ್ದ ಎಂಬ ಮಾಹಿತಿ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿ ನಡೆದ ಸ್ಟಿಂಗ್ ಆಪರೇಷನ್‌ಗೂ ರಿತೇಶ್‌ಗೂ ಇರುವ ಸಂಬಂಧವೇನು? ಈ ಕೃತ್ಯ ನಡೆಸಲು ಆತನಿಗೆ ಯಾರು ಪ್ರೇರಣೆ ನೀಡಿದ್ದರು? ಯಾರು ಹಣಕಾಸಿನ ನೆರವು ಒದಗಿಸಿದ್ದರು? ಮೊಬೈಲ್ ಖರೀದಿಗೆ ಬಳಸಿದ ಹಣದ ಮೂಲ ಯಾವುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಿಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣದಲ್ಲಿ ರಿತೇಶ್‌ನೊಂದಿಗೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸ್ಟಿಂಗ್ ಆಪರೇಷನ್‌ಗಾಗಿ ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್ ಖರೀದಿ ಮತ್ತು ಅದರ ಬಳಕೆಯ ಕುರಿತಾದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ದೊಡ್ಡ ಜಾಲದ ಶಂಕೆ:

ರಿತೇಶ್‌ನ ವಿಚಾರಣೆಯಿಂದ ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಇತರ ವ್ಯಕ್ತಿಗಳ ಪಾತ್ರ ಹಾಗೂ ಪ್ರಕರಣದ ಹಿಂದಿರುವ ಸಂಚಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಆದರೆ, ಈವರೆಗೆ ತನಿಖೆಯಿಂದ ಬಹಿರಂಗವಾಗಿರುವ ಮಾಹಿತಿಗಳ ಆಧಾರದಲ್ಲಿ ಮಾತ್ರ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಿಲ್ಲ.

ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣದಲ್ಲಿ ಸಿಸಿಬಿ ತನಿಖೆ ಮುಂದುವರಿದಿದ್ದು,ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಸುದ್ದಿ ವಾಹಿನಿಯೊಂದರ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರು ಸಿಸಿಎಚ್ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments