ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಎರಡನೇ ಬಾರಿ ಆಯ್ಕೆ ಬಯಸಿ ಪ್ರಚಾರದಲ್ಲಿ ಭಾಗಿಯಾಗಿದ್ದ ಡೊನಾಲ್ಡ್ ಟ್ರಂಪ್ ಮೇಲೆ 20 ವರ್ಷದ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಟ್ರಂಪ್ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಭಾನುವಾರ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಹಲವಾರು ಸುತ್ತಿನ ದಾಳಿ ನಡೆದಿದ್ದು, ಒಂದು ಬುಲೆಟ್ 78 ವರ್ಷದ ಡೊನಾಲ್ಡ್ ಟ್ರಂಪ್ ಅವರ ಕೆನ್ನೆ ಮತ್ತು ಕಿವಿಯನ್ನು ಬುಲೆಟ್ ಸವರಿಕೊಂಡು ಹೋಗಿದೆ. ಇದರಿಂದ ಟ್ರಂಪ್ ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಬುಲೆಟ್ ಸವರಿಕೊಂಡು ಹೋದ ವೇಗಕ್ಕೆ ಕಿವಿ ಮತ್ತು ಕೆನ್ನೆ ಮೇಲೆ ತರಚಿದಂತೆ ಗಾಯವಾಗಿ ರಕ್ತ ಸುರಿದಿದೆ. ಕೂಡಲೇ ಗುಪ್ತಚರ ಇಲಾಖೆ ಹಾಗೂ ಎಫ್ ಬಿಐ ರಕ್ಷಣೆಗೆ ಧಾವಿಸಿ ಟ್ರಂಪ್ ಅವರಿಗೆ ಯಾವುದೇ ಹಾನಿ ಆಗದಂತೆ ತಡೆದು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು.
ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಟ್ರಂಪ್, ಫೈಟ್, ಫೈಟ್ ಎಂದು ಘೋಷಣೆ ಕೂಗಿ ಎಲ್ಲರನ್ನು ಹುರಿದುಂಬಿಸುತ್ತಿದ್ದಾಗ 20 ವರ್ಷದ ಯುವಕ ಗುಂಡು ಹಾರಿಸಿದ್ದಾನೆ. ಇದರಿಂದ ಬೇರೆ ಯಾರಿಗೂ ಹಾನಿ ಆಗಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
20 ವರ್ಷದ ಯುವಕನ್ನು ಎಫ್ ಬಿಐ ಬಂಧಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರು ಗುಂಡಿನ ದಾಳಿ ನಡೆಸಿದ ಯುವಕನನ್ನು ಗುರುತಿಸಿದ್ದಾರೆ. ಆತ ಭಾಷಣ ನಿಗದಿಯಾಗಿದ್ದ ಸ್ಥಳದಿಂದ 50 ಅಡಿ ದೂರದ ಕಟ್ಟಡದ ಮಹಡಿಯ ಮೇಲೆ ರೈಫಲ್ ಹಿಡಿದುಕೊಂಡಿದ್ದ ಎಂದು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ಕಟ್ಟಡದ ಮೇಲೇರಿ ರೈಫಲ್ ಹಿಡಿದಿರುವುದನ್ನು ನೋಡಿ ನಾನು ಪೊಲೀಸರ ಗಮನಕ್ಕೆ ತೆಗೆದುಕೊಂಡು ಬಂದೆ. ಅಷ್ಟಾದರೂ ಟ್ರಂಪ್ ಯಾಕೆ ಭಾಷಣ ಮಾಡುತ್ತಿದ್ದಾರೆ. ಯಾಕೆ ಅವರಿಗೆ ರಕ್ಷಣೆ ನೀಡುತ್ತಿಲ್ಲ ಎಂದು ಭಾವಿಸಿದೆ. ಅಷ್ಟರಲ್ಲಿ ಆತ 5 ಸುತ್ತು ಗುಂಡು ಹಾರಿಸಿದ ಎಂದು ಪ್ರತ್ಯಕ್ಷರ್ಶಿ ಘಟನೆಯನ್ನು ವಿವರಿಸಿದ್ದಾರೆ.