ಹಮಾಸ್ ಉಗ್ರರನ್ನು ಕೇಂದ್ರೀಕರಿಸಿ ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 42 ಸಾವಿರಕ್ಕೇರಿದ್ದು, ಶವಗಳು ಬೀದಿನಾಯಿ ಪಾಲಾಗುತ್ತಿವೆ.
ಗಾಜಾದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಶವಗಳನ್ನು ಬೀದಿನಾಯಿಗಳು ಕಚ್ಚಿ ತಿನ್ನುತ್ತಿವೆ. ಇದರಿಂದ ಶವಗಳಿಗೆ ಕನಿಷ್ಠ ಅಂತ್ಯ ಸಂಸ್ಕಾರದ ಭಾಗ್ಯವೂ ಇಲ್ಲದಂತಾಗಿದೆ ಎಂದು ಸ್ಥಳೀಯ ರಕ್ಷಣಾ ಸಂಸ್ಥೆಗಳ ಪ್ರತಿನಿಧಿಗಳು ಹೇಳಿದ್ದಾರೆ.
ಯುದ್ಧಪೀಡಿತ ಪ್ರದೇಶಗಳಲ್ಲಿ ಸ್ನೇಹಿತರು, ಕುಟುಂಬದವರ ಶವಗಳಿಗಾಗಿ ಶೋಧ ಕಾರ್ಯ ನಡೆದಿದ್ದು, ಸಿಕ್ಕ ಬಹುತೇಕ ಶವಗಳು ಪ್ರಾಣಿಗಳು ಕಚ್ಚಿ ತಿಂದಿವೆ. ಇದರಿಂದ ಮನುಷ್ಯರ ದೇಹವನ್ನು ಗುರುತಿಸಲು ಕೂಡ ಅಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 7ರಂದು ಗಾಜಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿತ್ತು. ಮೊದಲ ದಿನವೇ 1269ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಇದುವರೆಗೂ ದಾಳಿಯಲ್ಲಿ 42,409 ಮಂದಿ ಮೃತಪಟ್ಟಿದ್ದು, 99,153 ಮಂದಿ ಗಾಯಗೊಂಡಿದ್ದಾರೆ. ಗಾಜಾ ನಡೆಸಿದ ಪ್ರತಿದಾಳಿಯಲ್ಲಿ 65 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನಾ ಪಡೆ ಅಧಿಕಾರಿಗಳು ವಿವರ ನೀಡಿದ್ದಾರೆ.